ಸುಳ್ಯ:ಹೆಚ್.ಎಂ ನಂದಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಬಿಫಾರಂ ನೀಡದ ಹಿನ್ನಲೆಯಲ್ಲಿ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದರೂ ನಂದಕುಮಾರ್ ಅವರ ಬೆಂಬಲಿಗರು ಚುನಾವಣೆಯಲ್ಲಿ ತಟಸ್ಥ ನಿಲುವು ತಳೆಯಲು ನಿರ್ಧರಿಸಲಾಗಿದೆ ಎಂದು ನಂದಕುಮಾರ್ ಅಭಿಮಾನಿ ಬಳಗದ ಪ್ರಮುಖರು ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂದಕುಮಾರ್ ಅಭಿಮಾನಿ ಬಳಗದ ಸಂಚಾಲಕ ಬಾಲಕೃಷ್ಣ ಬಳ್ಳೇರಿ ‘ನಂದಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್
ನೀಡುತ್ತಿದ್ದರೆ ಸುಳ್ಯದಲ್ಲಿ ಗೆಲ್ಲುವ ಅವಕಾಶ ಇತ್ತು. ಅವರಿಗೆ ಬಿಫಾರಂ ಸಿಗಬೇಕು ಎಂದು ಸಾಕಷ್ಟು ಪ್ರಯತ್ನ ನಡೆಸಿದ್ದೇವೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಸುಳ್ಯ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದ ಸಂದರ್ಭದಲ್ಲಿ ಭಾಗವಹಿಸಿದ ಕಾರ್ಯಕರ್ತರಲ್ಲಿ ಶೇ.99 ರಷ್ಟು ಮಂದಿ ನಂದಕುಮಾರ್ ಅವರ ಪರವಾಗಿ ಅಭಿಪ್ರಾಯ ನೀಡಿದ್ದರು.ಕೆಪಿಸಿಸಿ ಹಾಗು ಎಐಸಿಸಿ ತನಕ ಗೆಲ್ಲುವ ಅಭ್ಯರ್ಥಿ ನಂದಕುಮಾರ್ ಅವರೇ ಎಂದು ಸಂದೇಶ ತಿಳಿದಿದ್ದರೂ ಬಿಫಾರಂ ದೊರೆಯದೇ ಇದ್ದದು ಕಾರ್ಯಕರ್ತರಲ್ಲಿ ನೋವುಂಟು ಮಾಡಿದೆ.
ಪಕ್ಷೇತರರಾಗಿ ಸ್ಪರ್ಧೆ ಮಾಡದಂತೆ ಡಿ.ಕೆ.ಶಿವಕುಮಾರ್ ಅವರು ವಿನಂತಿಸಿದ ಮೇರೆಗೆ ಅವರ ಮಾತಿಗೆ ಬೆಲೆ ಕೊಟ್ಟು ಪಕ್ಷೇತರರಾಗಿ ಸ್ಪರ್ಧೆ ಮಾಡುವುದರಿಂದ ಹಿಂದೆ ಸರಿದಿದ್ದೇವೆ. ಆದರೆ ಸುಳ್ಯದ ಬ್ಲಾಕ್ ಕಾಂಗ್ರೆಸ್ ಮುಖಂಡರು ನಮ್ಮನ್ನು ಕರೆದು ಮಾತನಾಡಿಲ್ಲ.ಮಾತ್ರವಲ್ಲದೆ ರಮಾನಾಥ ರೈ ಅವರಜ ಬಂದು ಸಭೆ ನಡೆಸಿರುವುದರ ಬಗ್ಗೆಯೇ ಸುಳ್ಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿರುವುದು, ನಂದಕುಮಾರದ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದು ಖಂಡನೀಯ. ಈ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ನಂದಕುಮಾರ್ ಅಭಿಮಾನಿ ಬಳಗದ ಕೆ.ಗೋಕುಲ್ದಾಸ್, ಪ್ರವೀಣ್ಕುಮಾರ್ ನೆಡಿಂಜಿಗುತ್ತು, ಸಚಿನ್ರಾಜ್ ಶೆಟ್ಟಿ, ಭವಾನಿಶಂಕರ ಕಲ್ಮಡ್ಕ, ರವೀಂದ್ರಕುಮಾರ್ ರುದ್ರಪಾದ, ಸತೀಶ್ ಶೆಟ್ಟಿ ಬಲ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.