ಮಂಗಳೂರು:ಸಂಸದ್ ಕ್ರೀಡಾ ಮಹೋತ್ಸವ ಪ್ರಯುಕ್ತ ನ.23ರಂದು ಮಂಗಳೂರು ನಗರದಲ್ಲಿ ‘ನಮೋ ಚೆಸ್ ಟೂರ್ನಮೆಂಟ್ ‘ ಆಯೋಜಿಸಲಾಗಿದೆ. ನಗರದ ಯುಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಈ ನಮೋ ಚೆಸ್ ಟೂರ್ನಮೆಂಟ್ ನಡೆಯಲಿದೆ.ಈಗಾಗಾಲೇ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲು
500ಕ್ಕೂ ಹೆಚ್ಚು ಆಸಕ್ತರಿಂದ ನೋಂದಾವಣೆಯಾಗಿದ್ದು, ಸಬ್ ಜ್ಯೂನಿಯರ್ (U-10)Boys & Girls , ಜ್ಯೂನಿಯರ್ (U-15) Boys & Girls , ಓಪನ್ ಕೆಟಗರಿ ಈ ಮೂರು ವಿಭಾಗದಲ್ಲಿ ಟೂರ್ನಮೆಂಟ್ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಅಂದು ಬೆಳಗ್ಗೆ8ಕ್ಕೆ ತಪ್ಪದೇ ಕಡ್ಡಾಯವಾಗಿ ಹೆಸರು ನೋಂದಾಯಿಸಬೇಕಾಗಿದ್ದು, 8.30 ಕ್ಕೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ನಡೆಯಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕಾಗಿ ಫಿಟ್ ಯುವ ಪರಿಕಲ್ಪನೆಯಡಿ ಈ ಕ್ರೀಡಾ ಮಹೋತ್ಸವ ಆಯೋಜಿಸಲಾಗಿದೆ. ನ.23ರ ಬಳಿಕ ಪ್ರತಿ ವಾರವು ಸಂಸದ್ ಖೇಲ್ ಮಹೋತ್ಸವ ಅಂಗವಾಗಿ ವಾಲಿಬಾಲ್, ತ್ರೋಬಾಲ್, ಕುಸ್ತಿ, ಕಬ್ಬಡ್ಡಿ, ಹಗ್ಗ – ಜಗ್ಗಾಟ, ಕ್ರಿಕೆಟ್, ಬ್ಯಾಡ್ಮಿಂಟನ್ ಪಂದ್ಯಾಟಗಳನ್ನು ಆಯೋಜಿಸಲಾಗುತ್ತದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.





