ಸುಳ್ಯ:ಸುಳ್ಯ ನಗರ ಪಂಚಾಯತ್ 2026-27ನೇ ಸಾಲಿನ ಆಯವ್ಯಯವನ್ನು ಮಾ.27ರಂದು ಮಂಡಿಸಲಾಯಿತು. ಒಟ್ಟು 2.66 ಕೋಟಿಯ ಮಿಗತೆ ಬಜೆಟನ್ನು ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಎಂ.ಮಂಜುಳಾ ಮಂಡಿಸಿದರು. ಆರಂಭಿಕ ಶಿಲ್ಕು 4,57,03,609 ಸೇರಿ ಪ್ರಸ್ತುತ ವರ್ಷ ಒಟ್ಟು 13,59,41,892 ಆದಾಯ ಮತ್ತು
10,93,05,457 ಖರ್ಚು ನಿರೀಕ್ಷಿಸಲಾಗಿದ್ದು ರೂ. 2,66,36,435 ಮಿಗತೆ ಬಜೆಟ್ ನಿರೀಕ್ಷಿಸಲಾಗಿದೆ. ಎಸ್ಎಫ್ಸಿ ವೇತನ ಅನುದಾನ 83 ಲಕ್ಷ, ಎಸ್ಎಫ್ಸಿ ವಿದ್ಯುತ್ ಅನುದಾನ 1.45 ಕೋಟಿ, ಎಸ್ಎಫ್ಸಿ ಮುಕ್ತನಿಧಿ 5 ಲಕ್ಷ, 16ನೇ ಹಣಕಾಸು ಅನುದಾನ 1.85 ಕೋಟಿ, ಎನ್ಯುಎಲ್ಎಂ ಅನುದಾನ 5 ಲಕ್ಷ, ಎಸ್ಎಫ್ಸಿ ಕುಡಿಯುವ ನೀರಿನ ಅನುದಾನ 5 ಲಕ್ಷ ಸೇರಿ 4.28 ಕೋಟಿ ಅನುದಾನ ಹಾಗೂ 4.74 ಕೋಟಿ ಸ್ವಂತ ಆದಾಯ ಸೇರಿ ಒಟ್ಟು ರೂ 9,02,38,283 ಆದಾಯ ನಿರೀಕ್ಷಿಸಲಾಗಿದೆ.
ಖರ್ಚಿನಲ್ಲಿ ಕಟ್ಟಡಗಳ ವರ್ಗ 1 ರಲ್ಲಿ 2 ಕೋಟಿ, ಭೂಸ್ವಾಧೀನ ವೆಚ್ಚ 40 ಲಕ್ಷ, ರಸ್ತೆ, ಕಲ್ಲು ಹಾಸು, ಪಾದಾಚಾರಿ ಮಾರ್ಗ 1.28 ಕೋಟಿ, ಚರಂಡಿ 30 ಲಕ್ಷ, ಘನ ತ್ಯಾಜ್ಯ ಯಂತ್ರೋಪಕರಣ 25 ಲಕ್ಷ, ಕಟ್ಟಡ ದುರಸ್ತಿ, ನಿರ್ವಹಣೆ 10 ಲಕ್ಷ, ವೆತನ ಭತ್ಯೆಗಳು, ಘನ ತ್ಯಾಜ್ಯ ನಿರ್ವಹಣೆ ಪೌರ ಕಾರ್ಮಿಕರ ವೇತನ 21 ಲಕ್ಷ, ಘನ ತ್ಯಾಜ್ಯ ವಿಲೇವಾರಿ ಇಂಧನ 5 ಲಕ್ಷ, ಹಸಿ ಕಸ ವಿಲೇವಾರಿ, ಘನ ತ್ಯಾಜ್ಯ ನಿರ್ವಹಣೆ, ನೀರು ಸರಬರಾಜು ವಿದ್ಯುತ್ ವೆಚ್ಚ 1.28 ಕೋಟಿ, ಸೇರಿದಂತೆ ವಿವಿಧ ಖರ್ಚುಗಳ ಬಾಬ್ತು ಒಟ್ಟು 10,93,05,457 ರೂ ವೆಚ್ಚ ನಿರೀಕ್ಷಿಸಲಾಗಿದೆ.
ಬಳಿಕ ಬಜೆಟ್ ಬಗ್ಗೆ ಚರ್ಚೆ ನಡೆದು ಕೆಲವೊಂದು ತಿದ್ದುಪಡಿಗಳನ್ನು ಸೂಚಿಸಲಾಯಿತು.ಮುಖ್ಯಾಧಿಕಾರಿ ಬಸವರಾಜ, ಇಂಜಿನಿಯರ್ ಶಿವಕುಮಾರ್, ಲೆಕ್ಕಾಧಿಕಾರಿ ರಮೇಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.










