ಸುಳ್ಯ: ಸುಳ್ಯ- ಆಲೆಟ್ಟಿ ಸಂಪರ್ಕದ ಹಾಗೂ ಅಂತಾರಾಜ್ಯ ರಸ್ತೆಯಲ್ಲಿರುವ ನಾಗಪಟ್ಟಣ ಸೇತುವೆಯ ದುರಸ್ತಿ ಹಾಗೂ ನವೀಕರಣಕ್ಕೆ ಲೋಕೋಪಯೋಗಿ ಇಲಾಖೆಯ ವತಿಯಿಂದ 70 ಲಕ್ಷ ರೂ ಅನುದಾನ ಮಂಜೂರಾಗಿದೆ. ಸುಳ್ಯ-ಪಾಣತ್ತೂರು, ಸುಳ್ಯ-ಬಂದಡ್ಕ ಅಂತಾರಾಜ್ಯ ರಸ್ತೆಯ ಈ ಪ್ರಮುಖ ಸಂಪರ್ಕ ಸೇತುವೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ
ನಾಗಪಟ್ಟಣ ಸೇತುವೆಯಲ್ಲಿ ಬಿರುಕು
ಸೇತುವೆ ನವೀಕರಣಕ್ಕೆ ಅನುದಾನ ಬಿಡುಗಡೆಯಾಗಿದೆ. ಸದ್ಯದಲ್ಲಿಯೇ ನವೀಕರಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋಪಾಲ್ ಅವರು ತಿಳಿಸಿದ್ದಾರೆ. ಪಂಜ- ಗುತ್ತಿಗಾರು ರಸ್ತೆಯಲ್ಲಿ ಜಳಕದ ಹೊಳೆಯ ಸೇತುವೆಯ ದುರಸ್ತಿಗೆ 70 ಲಕ್ಷ ಅನುದಾನ ಬಿಡುಗಡೆಯಾಗಿದೆ. ಅಲ್ಲದೆ
ಜಳಕದ ಹೊಳೆ ಸೇತುವೆ
ಎಡಮಂಗಲ ಪುಳಿಕುಕ್ಕು ರಸ್ತೆಯಲ್ಲಿ ಮೋರಿ ನಿರ್ಮಾಣಕ್ಕೆ 35 ಲಕ್ಷ ಅನುದಾನ ಬಿಡುಗಡೆಯಾಗಿದೆ. ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡ ದುರಸ್ತಿಗೆ 16 ಲಕ್ಷ ಅನುದಾನ ಮಂಜೂರಾಗಿದೆ ಎಂದು ಗೋಪಾಲ್ ಅವರು ಮಾಹಿತಿ ನೀಡಿದ್ದಾರೆ.