ಸುಳ್ಯ:ಸುಳ್ಯ ನಗರ ಪಂಚಾಯತ್ನಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯುತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ
ಪ್ರಧಾನ ಮಂತ್ರಿ ಅವರ ಸ್ವಚ್ಛ ಭಾರತ ಕನಸನ್ನು ಪರಿಪೂರ್ಣವಾಗಿ ಶ್ರಮವಹಿಸಿ ಯಶಸ್ವಿಗೊಳಿಸಿದ ಕೀರ್ತಿ ಪೌರಕಾರ್ಮಿಕರಿಗೆ ಸಲ್ಲಬೇಕಾಗುತ್ತದೆ. ಅವರ ಶ್ರಮ ಇಲ್ಲದಿದ್ದಲ್ಲಿ ನಗರವಾಗಲಿ ಅಥವಾ
ಗ್ರಾಮೀಣ ಭಾಗವಾಗಲಿ ಸ್ವಚ್ಛವಾಗಿರಲು ಸಾಧ್ಯವೇ ಇಲ್ಲ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಪಂಚಾಯತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ವಹಿಸಿದ್ದರು. ನಗರ ಪಂಚಾಯತಿ ಸದಸ್ಯ ಎಂ. ವೆಂಕಪ್ಪಗೌಡರು ಮಾತನಾಡಿದರು. ವೇದಿಕೆಯಲ್ಲಿ ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ನಗರ ಪಂಚಾಯತ್ ಸದಸ್ಯರಾದ ಶೀಲಾ ಅರುಣ ಕುರುಂಜಿ, ಬಾಲಕೃಷ್ಣ ಭಟ್ ಕೊಡಂಕೇರಿ, ವಿನಯಕುಮಾರ್ ಕಂದಡ್ಕ, ಉಮ್ಮರ್ ಕೆ.ಎಸ್, ನಾರಾಯಣ ಶಾಂತಿನಗರ, ಡೇವಿಡ್ ಧೀರಾ ಕ್ರಾಸ್ತಾ, ಶಿಲ್ಪಾ ಸುದೇವ್, ನಾಮ ನಿರ್ದೇಶಿತ ಸದಸ್ಯ ರಾಜು ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು.
ನ.ಪಂ.ಮುಖ್ಯಾಧಿಕಾರಿ ಹೆಚ್. ಆರ್. ಬಸವರಾಜು ಸ್ವಾಗತಿಸಿ, ನಗರ ಪಂಚಾಯತಿ ಸಿಬ್ಬಂದಿ ದಿಲೀಪ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ನ.ಪಂ. ಸಿಬ್ಬಂದಿ ವರ್ಗದವರು ಪೌರಕಾರ್ಮಿಕರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮೊದಲು ಪೌರಕಾರ್ಮಿಕರ ಕಾಲ್ನಡಿಗೆ ಜಾಥಾ ನಡೆಯಿತು. ಬಳಿಕ ಪೌರಕಾರ್ಮಿಕರಿಗೆ ವಿವಿಧ ಆಟೋಟ ಸ್ಪರ್ಧಾ ಕಾರ್ಯಕ್ರಮ ನಡೆಯಿತು.





