ಬೆಳ್ಳಾರೆ:ಮುಕ್ಕೂರು ನೇಸರ ಯುವಕ ಮಂಡಲ, ನೇಸರ ಯುವತಿ ಮಂಡಲ ಆಶ್ರಯದಲ್ಲಿ ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸಹಕಾರದೊಂದಿಗೆ ನೇಸರ ದಶಪ್ರಣತಿ ಪ್ರಯುಕ್ತ ಫೆ.15 ರಂದು ಮುಕ್ಕೂರು ಶಾಲಾ ಸಭಾಂಗಣದಲ್ಲಿ ಅಂತರ್ ಜಿಲ್ಲಾಮಟ್ಟದ
ಕವಿಗೋಷ್ಟಿ ನಡೆಯಿತು.ಸುಳ್ಯ ಚುಟುಕು ಪರಿಷತ್ ಅಧ್ಯಕ್ಷೆ ಅಶ್ವಿನಿ ಕೋಡಿಬೈಲು ಉದ್ಘಾಟಿಸಿದರು.ವಾಹಿನಿ ಕಲಾ ಸಂಘ ಸುಳ್ಯ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಮನವಳಿಕೆ ಅಧ್ಯಕ್ಷತೆ ವಹಿಸಿದ್ದರು.
ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಅವರು ಕೃತಿ ಬಿಡುಗಡೆ ಮಾಡಿದರು.
ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್,ನೇಸರ ದಶಪ್ರಣತಿ ಸಮಿತಿ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು,ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು,ನೇಸರ ದಶಪ್ರಣತಿ ಸಮಿತಿ ಸಂಚಾಲಕ ಕುಂಬ್ರ ದಯಾಕರ ಆಳ್ವ,ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜಕ ನಾರಾಯಣ ಕುಂಬ್ರ ಮಾತನಾಡಿದರು.
ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಅನನ್ಯ ಎಚ್ ಸುಬ್ರಹ್ಮಣ್ಯ ಅವರ ಎರಡನೇ ಕೃತಿ ಪ್ರಗೀತ ಅನ್ನು ಬೆಳ್ಳಾರೆ ಠಾಣಾ ಉಪ ನಿರೀಕ್ಷಕ ಈರಯ್ಯ ದೂಂತೂರು ಬಿಡುಗಡೆ ಮಾಡಿದುರು.
ವೇದಿಕೆಯಲ್ಲಿ ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು. ನೇಸರ ಯುವತಿ ಮಂಡಲದ ಅಧ್ಯಕ್ಷೆ ಬೃಂದಾ ಪೂಜಾರಿ ಮುಕ್ಕೂರು ವಂದಿಸಿದರು. ಕೋಶಾಧಿಕಾರಿ ಯಕ್ಷಿತಾ ಚಾಮುಂಡಿಮೂಲೆ ನಿರೂಪಿಸಿದರು. ನೇಸರ ದಶಪ್ರಣತಿ ಸಮಿತಿಯ ಉಪಾಧ್ಯಕ್ಷರಾದ ನರಸಿಂಹ ತೇಜಸ್ವಿಕಾನಾವು, ದಾಮೋದರ ಗೌಡ ಕಂಡಿಪ್ಪಾಡಿ, ಉಮೇಶ್ ಕೆಎಂಬಿ, ಸದಸ್ಯರಾದ ಮೋಹನ ಬೈಪಡಿತ್ತಾಯ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಜೈನುದ್ದೀನ್ ತೋಟದಮೂಲೆ, ಜಯಂತ ಕೊಡಂಗೆ, ಗುಲಾಬಿ ಬೊಮ್ಮೆಮಾರು ಮೊದಲಾದವರು ಉಪಸ್ಥಿತರಿದ್ದರು.




