ಸುಳ್ಯ:ಸರ್ವ ಧರ್ಮೀಯರಿಂದ ಆದರಿಸಲ್ಪಟ್ಟ ಭಕ್ತಾದಿಗಳ ಕಷ್ಟ ಕಾರ್ಪಣ್ಯಗಳಿಗೆ ಪವಾಡ ಪುರುಷರ ಸಂದರ್ಶನದಿಂದ ಪರಿಹಾರ ಒದಗಿಸುವ ಹಾಗೂ ಜಾತಿ ಮತ ಬೇಧವಿಲ್ಲದೆ ಸಂದರ್ಶಿಸುವ ಭಕ್ತ ಜನರ ಆದರಣೀಯರಾದ ಹಝ್ರತ್ ವಲಿಯುಲ್ಲಾಹಿ ಮಾಂಬಳಿ ತಂಙಳ್ ಅವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಹಾಗೂ ಧಾರ್ಮಿಕ ಪ್ರವಚನ ಮತ್ತು ‘ನಯತೇ ಶರೀಫ್’ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಜನವರಿ 12ರಿಂದ 15ರ ತನಕ ಮೊಗರ್ಪಣೆ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು
ಹಿದಾಯತುಲ್ ಇಸ್ಲಾಂ ಜಮಾ ಅತ್ ಕಮಿಟಿ ಹಾಗೂ ಉರೂಸ್ ಸ್ವಾಗತ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಯಲ್ಲಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಉರೂಸ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಎಂಜೆಎಂ ಖತೀಬರಾದ ಹಾಫಿಳ್ ಶೌಖತ್ ಅಲಿ ಸಖಾಫಿ ಜ.12ರಂದು ಪೂ.10 ಗಂಟೆಗೆ ಉರೂಸ್ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಜಮಾಯತ್ ಕಮಿಟಿಯ ಅಧ್ಯಕ್ಷರಾದ ಜಿ. ಇಬ್ರಾಹಿಂ ಹಾಜಿ ಅವರು ಧ್ವಜರೋಹಣ ನೆರವೇರಿಸಿ ಉರೂಸ್ಗೆ ಚಾಲನೆ ನೀಡಲಿದ್ದಾರೆ.
ಸಂಜೆ 4ಗಂಟೆಗೆ ದ್ಸಿಕ್ಸ್ ಹಲ್ಕಾ ಕಾರ್ಯಕ್ರಮ ಅಸ್ಸಯ್ಯದ್ ಕುಂಞಿ ಕೋಯ ತಂಙಳ್ ಸಅದಿ ಸುಳ್ಯ ಇವರ ನೇತೃತ್ವಲ್ಲಿ ನಡೆಯಲಿದೆ. ಸಂಜೆ 7.30 ಕ್ಕೆ ಉರೂಸ್ ಉದ್ಘಾಟನೆ ಮತ್ತು ದುವಾಃವನ್ನು ಸಯ್ಯದ್ ಅಶ್ರಫ್ ತಂಙಳ್ ಆದೂರು ನೆರವೇರಿಸಲಿದ್ದಾರೆ. ರಾತ್ರಿ 9ರಿಂದ ನಬೀಲ್ ಬರ್ಕಾತ್ ಬೆಂಗಳೂರು ಮತ್ತು ಬಳಗದವರಿಂದ ‘ನಯತೇ ಶರೀಫ್’ ಉರ್ದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಜಿ. ಇಬ್ರಾಹಿಂ ಹಾಜಿ ವಹಿಸಲಿದ್ದಾರೆ. ಸ್ವಾಗತ ಭಾಷಣವನ್ನು ಅಬ್ದುಲ್ ಕರೀಂ ಸಖಾಫಿ ನೆರವೇರಿಸಲಿದ್ದಾರೆ.
ಜ.13ರಂದು ರಾತ್ರಿ 7.30 ಕ್ಕೆ ಅಸ್ಸಯ್ಯದ್ ಅಹ್ಮದ್ ಮುಕ್ತಾರ್ ತಂಙಳ್ ಕುಂಬೋಳ್ ದುವಾಃ ಆಶೀರ್ವಾದ ಮಾಡಲಿದ್ದಾರೆ.
ಖ್ಯಾತ ಪ್ರಭಾಷಣಗಾರರು ಹಾಗೂ ಧಾರ್ಮಿಕ ಪಂಡಿತರಾದ ಮುಸ್ತಫಾ ಸಖಾಫಿ ತೆನ್ನಲ ಮುಖ್ಯ ಭಾಷಣ ಮಾಡಲಿದ್ದಾರೆ.
ಜ.14ರಂದು ರಾತ್ರಿ 7.30ಕ್ಕೆ ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಲ್ ದುವಾಃ ಆಶೀರ್ವಚನ ಮಾಡಲಿದ್ದಾರೆ.
ಮುಖ್ಯ ಪ್ರಭಾಷಣಗಾರರಾಗಿ ಖ್ಯಾತ ಧಾರ್ಮಿಕ ಪಂಡಿತ ಅಬ್ದುಲ್ ರಶೀದ್ ಸಖಾಫಿ ಎಲಂಕುಳಂ ಕೇರಳ ಭಾಗವಹಿಸಲಿದ್ದಾರೆ.
ಜ.15 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಉರೂಸ್ ಸ್ವಾಗತ ಸಮಿತಿ ಚೇರ್ಮೆನ್ ಹಾಜಿ ಜಿ.ಇಬ್ರಾಹಿಂ ಹಾಜಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಮೊಗರ್ಪಣೆ ಎಂಜೆಎಂ ಖತೀಬರಾದ ಹಾಫಿಳ್ ಸೌಖತ್ ಆಲಿ ಸಖಾಫಿ ನೆರವೇರಿಸುವರು. ಕೂಟ್ ಪ್ರಾರ್ಥನೆಗೆ ಸಯ್ಯದ್ ಶಿಹಾಬುದ್ದೀನ್ ತಂಙಳ್ ಅಲ್ -ಬುಖಾರಿ ಕಡಲುಂಡಿ ಇವರು ನೇತೃತ್ವ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣಗಾರರಾಗಿ ಸುಪ್ರಸಿದ್ಧ ವಾಗ್ಮಿ ಇಬ್ರಾಹಿಂ ಸಖಾಫಿ ತಾತೂರು ಕೇರಳ ಇವರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಾಂಧಿನಗರ ಎಂಜೆಎಂ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಗಾಂಧಿನಗರ ಭಾಗವಹಿಸಲಿದ್ದಾರೆ. ಪ್ರತಿ ದಿನ ಜಮಾಯತ್ ಕಮಿಟಿಯ ಕಾರ್ಯಕಾರಿ ಸದಸ್ಯರು ಹಾಗೂ ಸಹ ಸಂಘಟನೆಗಳ ಅಧ್ಯಕ್ಷರುಗಳು ಹಾಗೂ ಮದರಸಾ ಅಧ್ಯಾಪಕ ವೃಂದದವರು, ಉರೂಸ್ ಹಾಗೂ ಸ್ವಾಗತ ಸಮಿತಿಯ ಎಲ್ಲಾ ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು.
ಹಿದಾಯತುಲ್ ಇಸ್ಲಾಂ ಜಮಾ ಅತ್ ಕಮಿಟಿ ಅಧ್ಯಕ್ಷರಾದ ಹಾಜಿ ಜಿ ಇಬ್ರಾಹಿಂ ಮಾತನಾಡಿ ಎರಡು ವರ್ಷಕ್ಕೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಮೊಗರ್ಪಣೆ ಉರೂಸ್ಗೆ ಎಲ್ಲರೂ ಆಗಮಿಸುವಂತೆ ವಿನಂತಿಸಿದರು.
ಹೆಚ್.ಐ.ಜೆ. ಸಮಿತಿ ನಿರ್ದೇಶಕರು ಹಾಗೂ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್. ಸಂಶುದ್ದೀನ್ ಮಾತನಾಡಿ ಜ.12ರಂದು ರಾತ್ರಿ 9 ರಿಂದ ನಬೀಲ್ ಬರ್ಕಾತ್ ಬೆಂಗಳೂರು ಮತ್ತು ಬಳಗದವರಿಂದ
‘ನಯತೇ ಶರೀಫ್’ ಉರ್ದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಈ ಬಾರಿಯ ಉರೂಸ್ನ ವಿಶೇಷತೆಯಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿ ಪದಾಧಿಕಾರಿಗಳಾದ ಉಮ್ಮರ್. ಹೆಚ್.ಎ, ಅಬ್ದುಲ್ ರಜಾಕ್, ಹನೀಫ್ ಪೊಸೋಟ್ ಉಪಸ್ಥಿತರಿದ್ದರು.