ಸುಳ್ಯ;ವಿಧಾನ ಪರಿಷತ್ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ.3 ರಂದು ಮತದಾನ ನಡೆಯಲಿದೆ. ಚುನಾವಣೆಗೆ ಎಲ್ಲಾ ಸಿದ್ಧತೆಗಳು ನಡೆಸಲಾಗಿದೆ. ನಾಳೆ ಪೂ. 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಸುಳ್ಯ ತಾಲೂಕಿನಲ್ಲಿ ಪಧವೀಧರ ಕ್ಷೇತ್ರಕ್ಕೆ ಎರಡು ಮತ್ತು
ಶಿಕ್ಷಕರ ಕ್ಷೇತ್ರಕ್ಕೆ ಎರಡು ಮತಗಟ್ಟೆಗಳು ಇರಲಿದೆ. ಪದವೀಧರ ಕ್ಷೇತ್ರಕ್ಕೆ ಸುಳ್ಯ ತಾಲೂಕು ಆಡಳಿತ ಸೌಧ(ಹಳೆಯ ಕಟ್ಟಡ) ಮತಗಟ್ಟೆ ಸಂಖ್ಯೆ 23 ಹಾಗೂ ನಾಡ ಕಚೇರಿ ಪಂಜ(ಹಳೆಯ ಕಟ್ಟಡ) ಮತಗಟ್ಟೆ ಸಂಖ್ಯೆ 24, ಶಿಕ್ಷಕರ ಕ್ಷೇತ್ರಕ್ಕೆ ಸುಳ್ಯ ತಾಲೂಕು ಆಡಳಿತ ಸೌಧ(ಹೊಸ ಕಟ್ಟಡ) ಮತಗಟ್ಟೆ ಸಂಖ್ಯೆ 23, ನಾಡಕಚೇರಿ ಪಂಜ(ಹೊಸ ಕಟ್ಟಡ) ಮತಗಟ್ಟೆ ಸಂಖ್ಯೆ 24 ಇರಲಿದೆ.ಮತಗಟ್ಟೆಯಲ್ಲಿ ಮೈಕ್ರೋ ಅಬ್ಸರ್ವರ್ ಇರಲಿದ್ದಾರೆ. ಮತಗಟ್ಟೆ ಅಧ್ಯಕ್ಷ ಅಧಿಕಾರಿ, ಮೊದಲನೇ ಮತಗಟ್ಟೆ ಅಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿ, ಡಿಗ್ರೂಪ್ ಸಿಬ್ಬಂದಿ ಭದ್ರತಾ ಸಿಬ್ಬಂದಿಗಳು ಇರಲಿದ್ದಾರೆ. ಚುನಾವಣೆಯ ವೆಬ್ ಕಾಸ್ಟಿಂಗ್ ನಡೆಯಲಿದೆ.
ಸಿದ್ಧಗೊಂಡಿರುವ ಮತಗಟ್ಟೆ
ಮತದಾರರ ಸಂಖ್ಯೆ:
ಪದವೀಧರ ಕ್ಷೇತ್ರದಲ್ಲಿ
ಸುಳ್ಯ ತಾಲೂಕಿನಲ್ಲಿ 706 ಗಂಡು ಹಾಗೂ 689 ಹೆಣ್ಣು ಸೇರಿ 1395 ಮತದಾರರು ಇದ್ದಾರೆ. ಸುಳ್ಯದಲ್ಲಿ 596 ಗಂಡು ಹಾಗೂ 556 ಹೆಣ್ಣು ಸೇರಿ 1162, ಪಂಜದಲ್ಲಿ 110 ಗಂಡು ಹಾಗೂ 123 ಹೆಣ್ಣು ಸೇರಿ 233 ಮತದಾರರಿದ್ದಾರೆ.
ಶಿಕ್ಷಕರ ಕ್ಷೇತ್ರದಲ್ಲಿ ತಾಲೂಕಿನಲ್ಲಿ 244 ಗಂಡು ಹಾಗೂ 285 ಹೆಣ್ಣು ಸೇರಿ 529 ಮತದಾರರಿದ್ದಾರೆ. ಸುಳ್ಯ ಮತಗಟ್ಟೆಯಲ್ಲಿ 219 ಗಂಡು 254 ಹೆಣ್ಣು ಸೇರಿ 473 ಮತದಾರರಿದ್ದಾರೆ. ಪಂಜದಲ್ಲಿ 25 ಹೆಣ್ಣು, 31 ಗಂಡು ಸೇರಿ 56 ಮತದಾರರು ಇದ್ದಾರೆ.
ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
ಕಾಂಗ್ರೆಸ್ ಪಕ್ಷದ ಪದವೀಧರ ಕ್ಷೇತ್ರದಲ್ಲಿ ಅಭ್ಯರ್ಥಿ ಆಯನೂರು ಮಂಜುನಾಥ್, ಬಿಜಪಿಯ ಡಾ.ಧನಂಜಯ ಸರ್ಜಿ, ಬಿಜೆಪಿ ಬಂಡಾಯವಾಗಿ ಸ್ಪರ್ಧಿಸುವ ಸ್ವತಂತ್ರ ಅಭ್ಯರ್ಥಿ ರಘುಪತಿ ಭಟ್, ಕಾಂಗ್ರೆಸ್ ಬಂಡಾಯದ ಸ್ವತಂತ್ರ ಅಭ್ಯರ್ಥಿ ಎಸ್.ಪಿ.ದಿನೇಶ್ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ ಕೆ ಮಂಜುನಾಥ್ ಕುಮಾರ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇ ಗೌಡ ಮಧ್ಯೆ ಸ್ಪರ್ಧೆ ನಡೆಯಲಿದೆ.