ಸುಳ್ಯ:ಕಡಬದ ಮರ್ದಾಳ ಸಮೀಪ ಕಾಡಾನೆ ದಾಳಿ ನಡೆಸಿ ವ್ಯಕ್ತಿ ಗಾಯಗೊಂಡ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿ ನೀಡಿದರು. ಸ್ಥಳವನ್ನು ಪರಿಶೀಲಿಸಿ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ನಂತರ ಆನೆ ಧಾಳಿಗೆ ಒಳಗಾದ ನೇಲ್ಯಡ್ಕ ನಿವಾಸಿ ಚೋಮ ಅವರ ಮನೆಗೆ ಶಾಸಕಿರವರು ಭೇಟಿ
ನೀಡಿದರು. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡುವ ಭರವಸೆ ನೀಡಿದರು. ಸ್ಥಳೀಯರ ಬೇಡಿಕೆಯಾದ ಅರಣ್ಯದಂಚಿನ ರಸ್ತೆ ಬದಿಗೆ ಸೋಲಾರ್ ದೀಪ, ರಸ್ತೆ ಬದಿ ಇರುವ ಪೊದೆಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು. ನಂತರ ಅಧಿಕಾರಿಗಳೊಂದಿದೆ ಚರ್ಚಿಸಿ ಗಾಯಗೊಂಡ ಚೋಮರವರ ಚಿಕಿತ್ಸೆ ವೆಚ್ಚವನ್ನು ಇಲಾಖೆಯಿಂದಲೇ ಭರಿಸುವಂತೆ ಹಾಗೂ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಧಿಕಾರಿ ವಿಮಲ್ ಬಾಬು ಆರ್, ಉಪ ವಲಯ ಅರಣ್ಯಧಿಕಾರಿ ಯೋಗೀಶ್ ಜಿ ಸಿ, ಗಸ್ತು ಅರಣ್ಯ ಪಾಲಕರು ಪ್ರಕಾಶ್, ಐತ್ತೂರು ಗ್ರಾಮ ಪಂ ಅಧ್ಯಕ್ಷರಾದ ವತ್ಸಲಾ ಜೆ, ಸದಸ್ಯರಾದ ಉಷಾ, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಮನೋಹರ್ ರೈ, ನಾರಾಯಣ ಶೆಟ್ಟಿ ಅತ್ಯಡ್ಕ, ಹರೀಶ್ ಬಂಟ್ರ, ಗಂಗಾಧರ ರೈ, ತಮ್ಮಯ್ಯ ಗೌಡ, ಭಾಗೀರಥಿ, ಕೆ ಟಿ ಪಿಲಿಪ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು