ಸುಳ್ಯ: ಸರಕಾರ ನೀಡಿದ 25 ಕೋಟಿ ವಿಶೇಷ ಅನುದಾನವನ್ನು ಪಾರದರ್ಶಕವಾಗಿ ಹಂಚಿಕೆ ಮಾಡಿದ್ದೇವೆ. ಜನರ ಬೇಡಿಕೆಗೆ ಅನುಗುಣವಾಗಿ ಆದ್ಯತೆಯ ಮೇರೆಗಡ ಅನುದಾನ ಹಂಚಿಕೆ ಮಾಡಿದ್ದೇವೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಸರಕಾರ ನೀಡಿದ 25 ಕೋಟಿ ಅನುದಾನವನ್ನು ಪಾರದರ್ಶಕವಾಗಿ ಹಂಚಿಕೆ ಮಾಡಬೇಕು ಎಂಬ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕರು ಪ್ರತಿ ಸೋಮವಾರ ಸುಳ್ಯದಲ್ಲಿ, ಮಂಗಳವಾರ ಕಡಬದಲ್ಲಿ ಜನರ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಜನರು ಹಲವಾರು ಅಭಿವೃದ್ಧಿ ಬೇಡಿಕೆಗಳನ್ನು ಮುಂದಿಡುತ್ತಾರೆ.ಅಲ್ಲದೆ ಕ್ಷೇತ್ರದಲ್ಲಿ ಎಲ್ಲಿ ಅಭಿವೃದ್ಧಿ ಬೇಡಿಕೆ ಇದೆ ಎಂಬ ಬಗ್ಗೆ ತನಗೂ ತಿಳಿದಿದೆ. ಜನರ ಹಾಗೂ ಕ್ಷೇತ್ರದಲ್ಲಿನ ಬೇಡಿಕೆಯ ಅನುಸಾರ ಆದ್ಯತೆಯ ಮೇರೆಗೆ ಅನುದಾನ ಮೀಸಲಿಟ್ಟಿದ್ದೇನೆ. 25 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ವಿಶೇಷ ಅನುದಾನದಡಿ ಸುಳ್ಯ ನಗರದಲ್ಲಿ ವಿವಿಧ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.










