ಸುಳ್ಯ: ಸುಳ್ಯ ತಾಲೂಕು ಪಂಚಾಯತ್ನ ಶಾಸಕರ ಕಚೇರಿಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸಾರ್ವಜನಿಕರ ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು.ಸಾರ್ವಜನಿಕರು ವಿವಿಧ ಬೇಡಿಕೆಗಳ ಅಹವಾಲು ಸಲ್ಲಿಸಿದರು. ಅಕ್ರಮ ಸಕ್ರಮ ಮಂಜೂರು, ವಿದ್ಯಾರ್ಥಿಗಳಿಗೆ
ಹಾಸ್ಟೆಲ್ ಮನವಿ, ಗ್ರಾಮೀಣ ರಸ್ತೆಗೆ ಅನುದಾನ, ಗ್ರಾಮೀಣ ಪ್ರದೇಶಗಳಿಗೆ ಬಸ್ ವ್ಯವಸ್ಥೆಯ ಸಭೆ ಹಾಗೂ ಮತ್ತಿತರ ಸಾರ್ವಜನಿಕ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದರು. ವಿವಿಧ ವೈಯುಕ್ತಿಕ ಬೇಡಿಕೆಗಳ ಬಗ್ಗೆಯೂ ಮನವಿ ಸಲ್ಲಿಸಿದರು. ನಂತರ ಮನವಿ ಪರಿಶೀಲಿಸಿ ಆದಷ್ಟು ಶೀಘ್ರವಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಸರಿಪಡಿಸಿಕೊಡಬೇಕಾಗಿ ಅಧಿಕಾರಿಗಳಿಗೆ ಸೂಚಿಸಲಾಯಿತು.









