ಸುಳ್ಯ: ಸುಳ್ಯದಲ್ಲಿ ಪ್ರಧಾನ ಕಛೇರಿ ಹೊಂದಿರುವ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಈಶ್ವರಮಂಗಲ ಶಾಖೆ ನ.27ರಂದು ಈಶ್ವರಮಂಗಲದ ಹಿರಾ ಟವರ್ನ ನೆಲಮಹಡಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಐ.ಕೆ.ಮಹಮ್ಮದ್ ಇಕ್ಬಾಲ್ ಎಲಿಮಲೆ ತಿಳಿಸಿದ್ದಾರೆ. ಸಂಘದ ಪ್ರಧಾನ ಶಾಖೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೂತನ ಶಾಖೆಯನ್ನು ರಾಜ್ಯ ವಿಧಾನ ಸಭಾ ಅಧ್ಯಕ್ಷರಾದ ಯು.ಟಿ ಖಾದರ್ ಉದ್ಘಾಟಿಸುವರು.ಭದ್ರತಾ ಕೊಠಡಿಯನ್ನು

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಲಿದ್ದಾರೆ. ತಾಲೂಕಿನಲ್ಲಿ ಇ-ಬ್ಯಾಂಕಿಂಗ್ ಸೇವೆಯನ್ನು ಪ್ರಪ್ರಥಮ ಬಾರಿಗೆ ಸಹಕಾರಿ ಕ್ಷೇತ್ರದಲ್ಲಿ ಪರಿಚಯಿಸಲಿದೆ ಎಂದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಐ ಕೆ ಮಹಮ್ಮದ್ ಇಟ್ಬಾಲ್ ಎಲಿಮಲೆ ವಹಿಸಲಿದ್ದಾರೆ. ಮಾಜಿ ಸಚಿವ ಬಿ. ರಮಾನಾಥ ರೈ ಸಂಘದ ಗ್ರಾಹಕರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಿದ್ದಾರೆ. ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಪಾಲ್ಗೊಟ್ಟು, ಚಾಪಾ ಕಾಗದಕ್ಕೆ ಚಾಲನೆ ನೀಡಲಿದ್ದಾರೆ.ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ ಜಯರಾಮ ರೈ 2024 ನೇ ಸಾಲಿನ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪನಿಬಂಧಕರಾದ ಎಚ್ ಎನ್.ರಮೇಶ್, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ
ಪೌಝಿಯ ಇಬ್ರಾಹಿಂ, ಸಹಕಾರಿಗಳಾದ ಜಾಕೆ ಮಾಧವ ಗೌಡ, ವಿಷ್ಣು ಭಟ್ ಬಿ, ರಾಜೀವಿ ಆರ್ ರೈ, ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಜನತಾ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ಉದ್ಯಮಿ ಕಿಶನ್ ಶೆಟ್ಟಿ ಮೇನಾಲ, ಜಿ.ಪಂ.ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು, ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ನ ಧರ್ಮಗುರುಗಳಾದ ರೆ.ಪಾ.ವಿಕ್ಟರ್ ಡಿ.ಸೋಜ, ಅಬ್ದುಲ್ ಅಜೀಜ್ ಬುಶ್ರಾ, ಹಿರಾ ಟವರ್ ಮಾಲಕ ಅಬ್ದುಲ್ ಖಾದರ್ ಹಾಜಿ ಭಾಗವಹಿಸಲಿದ್ದಾರೆ.
ಗೌರವ ಉಪಸ್ಥಿತರಾಗಿ ಸಂಘದ ಮಾಜಿ ಅಧ್ಯಕ್ಷರುಗಳಾದ

ಎಸ್. ಎಂ ಬಾಪು ಸಾಹೇಬ್, ಟಿ ಎಂ ಶಹೀದ್ ತೆಕ್ಕಿಲ್, ಜಿ ಎಂ ಮಹಮ್ಮದ್ ( ಆರ್ ಕೆ) ಈಶ್ವರಮಂಗಲ ಶಾಖೆಯ ಸಲಹಾ ಸಮಿತಿಯ ಸದಸ್ಯರಾದ ಹಾಜಿ ಅಬ್ದುಲ್ ರಹಿಮಾನ್ ಮೇನಾಲ,ಅಬ್ದುಲ್ ಖಾದರ್ ಹಾಜಿ ಹೀರಾ, ಮಹಮ್ಮದ್ ಬಡಗನ್ನೂರು, ಅಜೀಜ್ ಸಿ ಹೆಚ್,ಕೆ ಹೆಚ್ ಮಹಮ್ಮದ್ ಕುಂಞಿ, ಅಶ್ರಫ್ ಕೊಟ್ಯಾಡಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಘದ ಸಾಧನೆಯ ಹಾದಿ:
1997 ನವೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಂಡ ಸಂಸ್ಥೆಯು ಸುದೀರ್ಘ 24 ವರ್ಷಗಳನ್ನು ಮುಗಿಸಿ 25ನೇ ವರ್ಷದಲ್ಲಿ ಸಹಕಾರಿ ರಂಗದಲ್ಲಿ ತೊಡಗಿಸಿಕೊಂಡಿರುತ್ತದೆ. ಅಲ್ಪಸಂಖ್ಯಾತರ ವರ್ಗದ ಜನರ ಅಭಿವೃದ್ಧಿಗಾಗಿ ಹಾಗೂ ಪ್ರಗತಿಗಾಗಿ ಸ್ಥಾಪನೆಗೊಂಡ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರಿ ಸಂಘದಲ್ಲಿ ಒಟ್ಟು 3575 ಸದಸ್ಯರಿದ್ದು ಸಂಘದ ಹಿಂದಿನ ಸಾಲಿನಲ್ಲಿ ಶೇ 10 ರಷ್ಟು ಡಿವಿಡೆಂಡ್ ಅನ್ನು ನೀಡಿರುತ್ತೇವೆ, ಮತ್ತು 31.03.2023ಕ್ಕೆ ಸಂಘದ ಲಾಭಾಂಶವು ರೂ 7,03,594 ರಷ್ಟು ಇದ್ದು, ಪಾಲು ಬಂಡವಾಳವು ರೂ.23,35,597 ರಷ್ಟು ಇರುತ್ತದೆ ಮತ್ತು ವಿವಿಧ ಠೇವಣಾತಿಗಳಿಗೆ ವಾರ್ಷಿಕ ಶೇಕಡಾ 5ರಿಂದ 10ರ ತನಕ ಬಡ್ಡಿ ನೀಡುತ್ತಿದ್ದೇವೆ. 31.03.2023ಕ್ಕೆ ಠೇವಣಿಗಳುರೂ.4,31,62,146ಮತ್ತು ನಿಧಿಗಳು, ರೂ.46,47,623ರಷ್ಟು ಇರುತ್ತದೆ.ರೂ.4,27,15,466 ರಷ್ಟು ಸಾಲ ವಿತರಿಸಲಾಗಿದೆ. 31.03.2023ಕ್ಕೆ ಸಂಘದ ವ್ಯವಹಾರವುರೂ.45,08,57,513 ಇರುತ್ತದೆ.
ಪ್ರಸ್ತುತ ಸಂಘದಲ್ಲಿ ಜಾಮೀನು ಸಾಲ ಅಡಮಾನ ಸಾಲ,ಆಸ್ತಿ ಅಡವು ಸಾಲ, ವಾಹನ ಸಾಲ , ಯಂತ್ರೋಪಕರಣ ಸಾಲ, ತ್ವರಿತ ಗತಿಯಲ್ಲಿ ಚಿನ್ನಾಭರಣ ಸಾಲವನ್ನು ನೀಡಲಾಗಿದ್ದು 2022- 23 ನೇ ಸಾಲಿನಲ್ಲಿ ಉತ್ತಮ ವಸೂಲಾತಿ ಯಾಗಿದ್ದು ಲೆಕ್ಕಪರಿಶೋಧನಾ ವರದಿಯಲ್ಲಿ ಸಂಘವು ಎ ವರ್ಗಿಕರಣವನ್ನು ಪಡೆದಿರುತ್ತದೆ. ಸಂಘವು ನಿರಂತರ 2 ವರ್ಷದಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು, ಮಂಗಳೂರು ಇವರಿಂದ ಉತ್ತಮ ಸಹಕಾರಿ ಸಂಘದ ಸಾಧನಾ ಪ್ರಶಸ್ತಿಯನ್ನು
ಪಡೆದಿರುತ್ತವೆ. ಸಂಘವು ಈಗಾಗಲೆ ಬೆಳ್ಳಾರೆ ಶಾಖೆಯನ್ನು ಪ್ರಾರಂಭಿಸಿ ಉತ್ತಮ ರೀತಿಯಲ್ಲಿ ಪ್ರಗತಿಯನ್ನು ಹೊಂದಿದ್ದು ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡಲಾಗುತ್ತಿದೆ ಎಂದು ಮಹಮ್ಮದ್ ಇಕ್ಬಾಲ್ ಎಲಿಮಲೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕೆ.ಎಂ.ಮುಹಿಯುದ್ದೀನ್ ಫ್ಯಾನ್ಸಿ, ನಿರ್ದೇಶಕರಾದ ಎಸ್.ಸಂಶುದ್ದೀನ್ ಅರಂಬೂರು, ಎ.ಕೆ.ಹಸೈನಾರ್ ಕಲ್ಲುಗುಂಡಿ, ಶಾಫಿ ಕುತ್ತಮೊಟ್ಟೆ, ಜಾರ್ಜ್ ಡಿಸೋಜಾ, ಆಮಿನಾ ಎಸ್.ಜಯನಗರ, ಜೂಲಿಯಾ ಕ್ರಾಸ್ತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ನಾಯಕ್ ಐ ಉಪಸ್ಥಿತರಿದ್ದರು.







