ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವಾರ್ಷಿಕ ಕಾರ್ಯಕ್ರಮದಲ್ಲಿ 2023-24 ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಗೆ ಮೀಫ್ ಎಕ್ಸಲೆನ್ಸ್ ಅವಾರ್ಡ್ ಪ್ರಧಾನ ಮಾಡಲಾಯಿತು.ಶಾಲೆಯ
ಆಡಳಿತ ಮಂಡಳಿ ಅಧ್ಯಕ್ಷರಾದ ಟಿ.ಎಂ. ಶಹೀದ್ ತೆಕ್ಕಿಲ್, ವ್ಯವಸ್ಥಾಪಕರಾದ ಉನೈಸ್ ಪೆರಾಜೆ,ಗೌರವ ಅಧ್ಯಕ್ಷರಾದ ತಾಜ್ ಮಹಮ್ಮದ್, ಮುಖ್ಯ ಶಿಕ್ಷಕರಾದ ಸಂಪತ್ ಜೆ.ಡಿ ಹಾಗೂ ಶಿಕ್ಷಕ ವೃಂದದವರಾದ ಮೆಹೆಖ್ನಾಜ್, ತೌಸೀನಾ ಜಿ, ಸಾಧಿಕ ಕೆ, ಮಿಸಿರಿಯಾ ಈ ಪ್ರಶಸ್ತಿಯನು ಸ್ವೀಕರಿಸಿದರು.
ಉದ್ಘಾಟಕರಾಗಿ ಆಗಮಿಸಿದ ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್, ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಖ್ಯಮಂತ್ರಿಗಳ ಅಧೀನ ಪ್ರಧಾನ ಕಾರ್ಯದರ್ಶಿ ಎಲ್.ಕೆ ಅಥೀಖ್ ( ಹಣಕಾಸು ಇಲಾಖೆ), ಮೀಫ್ ನ ಅಧ್ಯಕ್ಷರಾದ ಮೂಸಬ್ ಪಿ.ಬ್ಯಾರಿ, ಮೀಫ್ನ ಉಪಾಧ್ಯಕ್ಷರಾದ ಕೆ.ಎಂ. ಮುಸ್ತಪಾ ಸುಳ್ಯ ಮತ್ತಿತರರು ಇದ್ದರು.