ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಲೋಕ ಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ಧಾರಿ,ರೈಲ್ವೇ,ಬಂದರು,ವಿಮಾನ ನಿಲ್ದಾಣ,ಸ್ಮಾರ್ಟ್ ಸಿಟಿ,ಆದರ್ಶ ಗ್ರಾಮ ಯೋಜನೆ ಸೇರಿದಂತೆ ಅಭಿವೃದ್ಧಿಗೆ ಕಳೆದ 15 ವರ್ಷಗಳಲ್ಲಿ 1,80,000 ಕೋಟಿ ರೂಪಾಯಿಯ ಅನುದಾನ ವೆಚ್ಚ ಮಾಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಮಾಧ್ಯಮ ಸಂವಾದ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ
ಶ್ರೀನಿವಾಸ ಮಲ್ಯರಿಂದ ಹಿಡಿದು ಬಳಿಕ ಬಂದ ಎಲ್ಲಾ ಸಂಸದರ ಶಾಸಕರ,ಸಚಿವರ ಕೊಡುಗೆ ಇದೆ ಆ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆ ರಾಷ್ಟ್ರದ ಅತ್ಯಂತ ಹೆಚ್ಚು ಅಭಿವೃದ್ಧಿ ಶೀಲ ಜಿಲ್ಲೆಯಾಗಿ ಖ್ಯಾತಿ ಪಡೆದಿದೆ. 15 ವರ್ಷಗಳ ಕಾಲ ನನ್ನ ಅಧಿಕಾರಾವಧಿ ಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ವೇಗ ದೊರೆತಿದೆ. ಹಿಂದೆ ಸುರತ್ಕಲ್ನಲ್ಲಿ ಕೆಆರ್ಇಸಿ ಇತ್ತು. ಅದನ್ನು ಎನ್ಐಟಿಕೆ ಮಾಡಿ ಅಭಿವೃದ್ಧಿಪ ಡಿಸಲಾಗಿದೆ. ಮಂಗಳೂರು ಬಂದರನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 4000 ಕೋಟಿ ರೂ ಅನುದಾನ ನೀಡಿ ಅಭಿವೃದ್ಧಿ ಯೋಜನೆಗೆ ಅವರೇ ಶಿಲಾನ್ಯಾಸ ಮಾಡಿದ್ದರು. ಈಗ ಮಾದರಿಯಾದ ಪೋರ್ಟ್ ಆಗಿದೆ.2010 ಬಳಿಕ ರಾಜ್ಯದ ಎರಡನೆ ದೊಡ್ಡ ವಿಮಾನ ನಿಲ್ದಾಣವಾಗಿದೆ.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗ 24 ಗಂಟೆ ಚಾಲನೆಯಲ್ಲಿದೆ. ನಾನು ಸಂಸದನಾದ ಆರಂಭದ ಹೊತ್ತಿಗೆ ಮಧ್ಯಾಹ್ನದ ವರೆಗೆ ಮಾತ್ರ ಕಾರ್ಯಾಚರಣೆ ಇತ್ತು.ಈಗ ಅಂತಾರಾಷ್ಟ್ರೀಯ ವಿಮಾನಗಳು ಹೋಗುತ್ತಿವೆ.
ಮಂಗಳೂರು ಅಂತಾರಾ ಷ್ಟ್ರೀಯ ವಿಮಾನ ನಿಲ್ದಾಣ, ಬಂದರು,ರೈಲ್ವೇ ಅಭಿವೃದ್ಧಿ ಕಾರ್ಯಗಳು ಆಗಿದೆ. ಮಂಗಳೂರು ಪ್ರತ್ಯೇಕ ರೈಲ್ವೇ ವಿಭಾಗದ ಪ್ರಸ್ತಾಪವನ್ನು ಮಾಡಲಾಗಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣ ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಯಾಗುತ್ತಿದೆ. ಎರಡು ಹೊಸ ಪ್ಲಾಟ್ಫಾರ್ಮ್ಗಳನ್ನು ನಿರ್ಮಿಸಿದ್ದೇವೆ. ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣ 24 ಕೋಟಿ, ಬಂಟ್ವಾಳದ ರೈಲು ನಿಲ್ದಾಣ 25 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಆಗುತ್ತಿದೆ. ಮಂಗಳೂರು ಜಂಕ್ಷನ್ 350 ಕೋಟಿ ವೆಚ್ಚದಲ್ಲಿ ವಿಶ್ವದರ್ಜೆ ಉನ್ನತೀಕರಿಸುವ ಕಾಮಗಾರಿ ನಡೆದಿದೆ,ಸ್ಮಾರ್ಟ್ ಸಿಟಿ, ಅಮೃತ್ ಯೋಜನೆಗಳ ಅಡಿಯಲ್ಲಿ ಮಂಗಳೂರು ನಗರಕ್ಕೆ ಸಾವಿರಾರು ಕೋಟಿ ರೂ.ಗಳ ಅನುದಾನ ಬಂದಿದೆ.
ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕಾಂಪ್ಲೆಕ್ಸ್, ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಕ್ರೀಡಾಂಗಣ ನಿರ್ಮಾಣವಾಗಿದೆ. ಸರಕಾರಿ ವೆನ್ಲಾಕ್ ಆಸ್ಪತ್ರೆ ಅಭಿವೃದ್ಧಿಯಾಗಿದೆ. ಸಾಗರಮಾಲಾ ಯೋಜನೆಯಲ್ಲಿ ಅನುದಾನ ಕೊಟ್ಟಿದ್ದಾರೆ. ದೇಶದಲ್ಲಿ ಒಂದೇ ಒಂದು ಕೋಸ್ಟ್ಗಾರ್ಡ್ ತರಬೇತಿ ಕೇಂದ್ರ ಕೊಚ್ಚಿಯಲ್ಲಿ. ಇಂದು 1000 ಕೋಟಿ ವೆಚ್ಚ ಮಾಡಿ ಮಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರ ಪ್ರಾರಂಭಿಸಲಾಗಿದೆ. ಅನಂತಕುಮಾರ್ ಅವರ ಸಚಿವರಾಗಿದ್ದಾಗ ಅನುಮತಿ ನೀಡಿದ ಪ್ಲಾಸ್ಟಿಕ್ ಪಾರ್ಕ್ ಈಗ ನಿರ್ಮಾಣವಾಗುತ್ತಿದೆ ಶೇ.80ರಷ್ಟು ಕಾಮಗಾರಿ ಪೂರ್ಣ ಗೊಂಡಿದೆ ಎಂದು ನಳಿನ್ ಮಾಹಿತಿ ನೀಡಿದರು.
1, 13,000 ಕೋಟಿ ರೂ.ಗಳನ್ನು ನರೇಂದ್ರ ಮೋದಿ ಸರಕಾರ ಈ ಜಿಲ್ಲೆಯ ಅಭಿವೃದ್ಧಿಗೆ ಕೊಟ್ಟಿದೆ. ಗ್ರಾಮಸ್ವರಾಜ್ಯದ ಕಲ್ಪನೆ ಅಡಿಯಲ್ಲಿ ಸಂಸದರ ಆದರ್ಶ ಗ್ರಾಮದ ಯೋಜನೆ ರೂಪಿಸಲಾಗಿದೆ. ಬಳ್ಪ ಇಂದು 60 ಕೋಟಿ ರೂ ವೆಚ್ಚದಲ್ಲಿ ಆದರ್ಶ ಗ್ರಾಮವಾಗಿ ಅಭಿವೃದ್ಧಿಯಾಗಿದ್ದು ಬಿಜೆಪಿ ಕಾಲದಲ್ಲಿ. ಜಲಜೀವನ್ ಮಿಷನ್ ಅಡಿಯಲ್ಲಿ 1,78,000 ನಳ್ಳಿಗಳ ಜೋಡಣೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 1,50,000 ರೈತರು ಫಲಾನುಭವಿಗಳಾಗಿದ್ದಾರೆ.2009ರಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭ ವಾಗಿದೆ.100 ಜನೌಷಧಿ ಕೇಂದ್ರ ಆರಂಭ ವಾಗಿದೆ.ಎಂಆರ್ಪಿಎಲ್ ಮೂರನೆ ಹಂತದ
ವಿಸ್ತರಣೆ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. 3ಲಕ್ಷ ಜನರಿಗೆ ಮುದ್ರಾ ಯೋಜನೆಯಲ್ಲಿ ಸಾಲ ನೀಡಲಾಗಿದೆ. ಚಾರ್ಮಾಡಿ ಘಾಟ್ ರಸ್ತೆ 300 ಕೋಟಿ ರೂಪಾಯಿ ಯೋಜನೆ ಮಂಜೂರಾಗಿದೆ.
ಶಿರಾಡಿ ಸುರಂಗ ಮಾರ್ಗ 2,500 ಕೋಟಿ ರೂ ಯೋಜನೆ ಡಿಪಿಆರ್ ಆಗಿದೆ.ಅಡ್ಡಹೊಳೆ -ಬಿಸಿರೋಡ್ ಕಾಮಗಾರಿ,ಬಿಕರ್ನಕಟ್ಟೆ ಸಾಣೂರು ರಸ್ತೆ ಕಾಮಗಾರಿ ಶೀಘ್ರ ಪೂರ್ಣ ಗೋಳ್ಳಲಿದೆ.ನಂತೂರು ಪ್ಲೈ ಓವರ್,ಕೆಪಿಟಿ ಪ್ಲೈ ಓವರ್ 360 ಕೋಟಿ ರೂಪಾಯಿ ಯೋಜನೆ ಟೆಂಡರ್ ಆಗಿದೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಜಿಲ್ಲೆಗೆ 17,000 ಕೋಟಿ ರೂಪಾಯಿ ಮಂಜೂರಾಗಿದೆ. ಮಂಗಳೂರಿನಲ್ಲಿ 75,000 ಗ್ಯಾಸ್ ಪೈಪ್ ಲೈನ್ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. 2ಲಕ್ಷ ಸಂಪರ್ಕದ ಗುರಿ ಇದೆ.ಬಿಎಸ್ ಎನ್ ಎಲ್ ನ ಹೊಸ ಟವರ್ ನಿರ್ಮಿಸಲಾಗಿದೆ ಎಂದು ತಾನು ಸಂಸದನಾಗಿದ್ದ ಅವಧಿಯಲ್ಲಿ ನಡೆದ ಯೋಜಬೆಗಳ ಬಗ್ಗೆ ಮಾಧ್ಯಮ ಪ್ರತಿನಿಧಿ ಗಳಿಗೆ ಮಾಹಿತಿ ನೀಡಿದರು. ತಾನು ಮುಂದೆ ಪಕ್ಷ ವಹಿಸುವ ಕೆಲಸವನ್ನು ಮಾಡುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ವಿವರಿಸಿದರು.
ಮಾಧ್ಯಮ ಸಂವಾದ ಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರದಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಮಂಗಳೂ ರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಉಪಸ್ಥಿತ ರಿದ್ದರು. ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು,