ಸುಳ್ಯ:ವಿಜಯಕುಮಾರ್ ಮಯೂರಿ ನೇತೃತ್ವದ ಮಯೂರಿ ರೆಸ್ಟೋರೆಂಟ್ನ ಸಹ ಸಂಸ್ಥೆ ಮಯೂರಿ ಟಾಪ್ ಹೌಸ್ ರೆಸ್ಟ್ರೊ ಡಿ.25 ರಂದು ಶುಭಾರಂಭಗೊಳ್ಳಲಿದೆ. ಕುರುಂಜಿಭಾಗ್ನ ಕೆವಿಜಿ ಸರ್ಕಲ್ನ ಮಯೂರಿ ರೆಸ್ಟೋರೆಂಟ್ನ ಮೇಲ್ಭಾಗದಲ್ಲಿ ಡಿ.25 ಬುಧವಾರ ಪೂ.9:45
ಮಯೂರಿ ಟಾಪ್ ಹೌಸ್ ರೆಸ್ಟ್ರೊ ಉದ್ಘಾಟನೆಯಾಗಲಿದೆ. ಬೆಳಾಲು ಶ್ರೀ ಕ್ಷೇತ್ರ ಆರಿಕೊಡಿಯ ಧರ್ಮದರ್ಶಿಗಳಾದ ಹರೀಶ್ ಆರಿಕೊಡಿ ಹಾಗೂ ಸುಳ್ಯ ಎಒಎಲ್ಇಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.
ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ
ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ, ನ್ಯಾಯವಾದಿಗಳಾದ ನಾರಾಯಣ ಕೆ ಸುಳ್ಯ,ನಂದಾ ಸ್ಟೋರ್ನ ಮಾಲಕರಾದ ಸದಾನಂದ ಕೆ ಸಿ, ಡಿ.ಎಂ.ಕಾಂಪ್ಲೆಕ್ಸ್ನ ಮಾಲಕರಾದ
ಡಿ.ಎಂ ಉಮ್ಮರ್, ಭಾರತ್ ಮೆಡಿಕಲ್ಸ್ನ ಮಾಲಕರಾದ
ಪ್ರಭಾಕರ್ ಬಿ ಪಿ ಮಯೂರಿ,ಸಚಿನ್ ಪ್ರಕಾಶ್ (ಝೀ ಕನ್ನಡ)
ಸುಹಾನಾ ಸಯ್ಯದ್ (ಸರಿಗಮಪ, ಝೀ ಕನ್ನಡ)
ಶ್ರೀ ಹಿತೇಶ್ ಕಾಪಿನಡ್ಕ (ಕಾಮಿಡಿ ಕಿಲಾಡಿಗಳು, ಚಲನಚಿತ್ರ ನಟ)
ಹಾಗು ಝೀ ಕನ್ನಡ ಕಾಮಿಡಿ ಕಿಲಾಡಿಗಳು ಮತ್ತು ಸರಿಗಮಪ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಮಯೂರಿ ರೆಸ್ಟೋರೆಂಟ್ನ ಮಾಲಕರಾದ
ವಿಜಯ್ ಕುಮಾರ್ ಮಯೂರಿ, ರೂಪ ವಿಜಯ್ ಕುಮಾರ್, ತುಷಾರ್ ಗೌಡ ಮತ್ತು ತಿಳಿಸಿದ್ದಾರೆ.