ಪಲ್ಲೆಕೆಲೆ: ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯವು ಭಾರೀ ಮಳೆಯಿಂದಾಗಿ ರದ್ದಾಗಿದೆ. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 266 ರನ್ಗೆ ಆಲೌಟಾದ ಬೆನ್ನಿಗೆ ಭಾರೀ ಮಳೆ
ಸುರಿದ ಪರಿಣಾಮ ಪಾಕ್ನ ರನ್ ಚೇಸಿಂಗ್ ಸಾಧ್ಯವಾಗಲಿಲ್ಲ. ಭಾರೀ ಮಳೆ ಸುರಿದ ಕಾರಣ ಪಾಕಿಸ್ಥಾನಕ್ಕೆ ಬ್ಯಾಟಿಂಗ್ಗೆ ಇಳಿಯಕು ಸಾಧ್ಯವಾಗಲಿಲ್ಲ. ಪಂದ್ಯ ರದ್ದಾದ ಕಾರಣ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಯಿತು. ಭಾರತ ಮುಂದಿನ ಪಂದ್ಯದಲ್ಲಿ ನೇಪಾಲ ತಂಡವನ್ನು ಎದುರಿಸಲಿದೆ. ಪಾಕಿಸ್ಥಾನ ತನ್ನ ಮೊದಲ ಪಂದ್ಯದಲ್ಲಿ ನೇಪಾಳವನ್ನು ಮಣಿಸಿತ್ತು.