ಸುಳ್ಯ: ಸುಳ್ಯ ಬ್ಲಾಕ್ ಅಸಂಘಟಿತ ಅಧ್ಯಕ್ಷರಾಗಿ ಮಂಜುನಾಥ ಕಂದಡ್ಕ ನೇಮಕಗೊಂಡಿದ್ದಾರೆ.ಜಿಲ್ಲಾ ಅಸಂಘಟಿತ ಘಟಕದ ಅಧ್ಯಕ್ಷ ಅಬ್ಬಾಸ್ ಅಲಿ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಅಸಂಘಟಿತ ಕಾರ್ಮಿಕ ಘಟಕದ
ಮಾಸಿಕ ಸಭೆಯಲ್ಲಿ ಈ ನೇಮಕ ನಡೆಯಿತು. ಸಭೆಯಲ್ಲಿ ಜಿಲ್ಲಾ ಅಸಂಘಟಿತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಞಾನಶೀಲನ್ ಕಲ್ಲುಗುಂಡಿ, ಕೆಪಿಸಿಸಿ ಕಾರ್ಮಿಕ ವಿಭಾಗ ಜಂಟಿ ಕಾರ್ಯದರ್ಶಿ,ಸುರೇಶ್ ಕುಮಾರ್, ಮುಖಂಡರಾದ ಶಿವಕುಮಾರ್ ಕಂದಡ್ಕ, ಸರವಣನ್ ಆರ್ ಬೇಂಗಮಲೆ, ಅರುಣಾಚಲಂ ಕೂಟೇಲು, ಚಂದ್ರನ್ ವಿ ಕೂಟೇಲು,ರಕ್ಷಿತ್ ದೊಡ್ಡಡ್ಕ,ಪ್ರೇಮ ಹರೀಶ್ವರನ್ ಸಭೆಯಲ್ಲಿ ಉಪಸ್ಥಿತದ್ದರು.













