ಮಂಗಳೂರು: ಪತ್ರಕರ್ತರಿಗೆ ಮಣಿಪಾಲ ಅರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಿತು.
ಮಾಹೆ ಟೀಚಿಂಗ್ ಹಾಸ್ಪಿಟಲ್ ಚೀಫ್ ಒಪರೇಟಿಂಗ್ ಆಫೀಸರ್ ಆನಂದ್ ವೇಣುಗೋಪಾಲ್ ಹಾಗೂ ಕೆ ಎಂ ಸಿ ಆಸ್ಪತ್ರೆ ಡೀನ್ ಡಾ.ಉನಿಕೃಷ್ಣನ್ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹಸ್ತಾಂತರಿಸಿದರು.ಮಾಹೆ ಸಂಸ್ಥಾಪಕ
ಡಾ. ಟಿ ಎಂ ಎ ಪೈ ಅವರ ಕನಸಿನಂತೆ 2000 ರ ಇಸವಿ ಯಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಇದು ಲಭ್ಯವಿದೆ ಎಂದು ಆನಂದ್ ವೇಣುಗೋಪಾಲ್ ತಿಳಿಸಿದರು.
ಕೆ ಎಂ ಸಿ ಆಸ್ಪತ್ರೆಯ ಅತ್ತಾವರ ವೈದ್ಯಕೀಯ ಅಧೀಕ್ಷಕ ಡಾ ಚಕ್ರಪಾಣಿ ಮಾತನಾಡಿ ಈ ಯೋಜನೆಯು ಒಂದು ವರ್ಷ ಮತ್ತು ಎರಡು ವರ್ಷದ ಅವಧಿ ಹೊಂದಿದೆ. ಈ ಅರೋಗ್ಯ ಕಾರ್ಡ್ ಹೊಂದಿದವರು ಕೆಎಂಸಿ ಆಸ್ಪತ್ರೆ ಅತ್ತಾವರ, ಕೆಎಂಸಿ ಆಸ್ಪತ್ರೆ ಜ್ಯೋತಿ, ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲ್, ಕೆಎಂಸಿ ಆಸ್ಪತ್ರೆ ಮಣಿಪಾಲ, ಡಾ ಟಿ ಎಂ ಎ ಪೈ ಉಡುಪಿ ಹಾಗೂ ಕಾರ್ಕಳ, ಗೋವಾ ಗಳಲ್ಲಿ ರಿಯಾಯತಿ ಸೌಲಭ್ಯ ಪಡೆಯಬಹುದು.
ಕಾರ್ಡ್ ಹೊಂದಿದವರು ಮಣಿಪಾಲ ಕಾಲೇಜು ಒಫ್ ಡೆಂಟಲ್ ಸೈನ್ಸಸ್ ಮಂಗಳೂರು ಹಾಗೂ ಮಣಿಪಾಲ ದಲ್ಲಿ ರಿಯಾಯತಿ ಪಡೆದುಕೊಳ್ಳಬಹುದು ಎಂದು ಹೇಳಿದರು.ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲ್ ಆಸ್ಪತ್ರೆ ಮುಖ್ಯ ಆಡಳಿತ ಅಧಿಕಾರಿ ಡಾ. ಶಿವಾನಂದ ಪ್ರಭು,ಕೆಎಂಸಿ ಮಾರುಕಟ್ಟೆ ವಿಭಾಗದ ಮುಖ್ಯ ವ್ಯವಸ್ಥಾಪಕ ಸಚಿನ್ ಕಾರಂತ್,ಕೆಎಂಸಿ ಆಸ್ಪತ್ರೆ ಮುರುಕಟ್ಟೆ ವಿಭಾಗದ ಮುಖ್ಯಸ್ಥ ರಾಕೇಶ್, ಮಾರ್ಕೆಟಿಂಗ್ ವಿಭಾಗದ ಪ್ರತಿನಿಧಿ ಕಾರ್ತಿಕ್ ನಾಯಕ್,ಹುಬರ್ಟ್ ಉಪಸ್ಥಿತರಿದ್ದರು. ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲ್ ಇದರ ಸಾರ್ವಜನಿಕ ಸಂಪರ್ಕ್ ಅಧಿಕಾರಿ ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.