ಸುಳ್ಯ:ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಆಶ್ರಯದಲ್ಲಿ ಮಾ. 8ರಂದು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಸುಳ್ಯದ ಲಯನ್ಸ್ ಸಭಾಭವನದಲ್ಲಿ ನಡೆಯಲಿದ್ದು,ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ತಾಲೂಕು ಮಹಿಳಾ ಒಕ್ಕೂಟದ ಸಭಾಂಗಣದಲ್ಲಿ ನಡೆಯಿತು.ಸಾಹಿತಿ ಜಯಮ್ಮ ಚೆಟ್ಟಿಮಾಡ ಆಮಂತ್ರಣ ಪತ್ರಿಕೆಯನ್ನು
ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಪುಷ್ಪಾ ಡಿ. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಜಿಲ್ಲಾ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಹರಿಣಿ ಸದಾಶಿವ, ತಾಲೂಕು ಮಹಿಳಾ ಒಕ್ಕೂಟದ ಗೌರವಾಧ್ಯಕ್ಷೆ ಮಧುಮತಿ ಬೊಳ್ಳೂರು, ಕಾರ್ಯದರ್ಶಿ ಹೇಮಾ ವೇಣುಗೋಪಾಲ್, ಖಜಾಂಚಿ ಚಂದ್ರಾಕ್ಷಿ ಜೆ. ರೈ, ಉಪಾಧ್ಯಕ್ಷೆ ಪುಷ್ಪಾ ಮಾಣಿಬೆಟ್ಟು, ನಿರ್ದೇಶಕರುಗಳಾದ ಅನಿತಾ ಸುತ್ತುಕೋಟೆ, ಚಂದ್ರಾವತಿ ಬದಿಕಾನ ಹಾಗೂ ಹೇಮಲತಾ ದೇಂಗೋಡಿ ಮತ್ತು ಸುಮಂಗಲ ಕೋಳಿವಾಡ ಉಪಸ್ಥಿತರಿದ್ದರು. ಹೇಮಾ ವೇಣುಗೋಪಾಲ್ ಸ್ವಾಗತಿಸಿ, ಚಂದ್ರಾಕ್ಷಿ ಜೆ ರೈ ವಂದಿಸಿದರು.








