ಸುಳ್ಯ: ಇಂದು ಬೀಸಿದ ಭಾರೀ ಗಾಳಿಗೆ ಮತ್ತು ಮಳೆಗೆ ಸಂಪಾಜೆ ಗ್ರಾಮದ ದರ್ಖಾಸ್ತಿನಲ್ಲಿ ಮೂರು ಮನೆಗಳಿಗೆ ಹಾನಿ ಸಂಭವಿಸಿದೆ. ಮನೆಗಳಿಗೆ ಮರ, ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ದರ್ಖಾಸ್ತು ಭಾಗದಲ್ಲಿ ರಸ್ತೆಗೆ ಮರ ಬಿದ್ದು ರಸ್ತೆ ತಡೆ ಉಂಟಾಗಿತ್ತು.ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಸದಸ್ಯ ಎಸ್.ಕೆ.ಹನೀಫ ಅವರ ನೇತೃತ್ವದಲ್ಲಿ ಸ್ಥಳೀಯರ ಸಹಕಾರದಲ್ಲಿ ಮರಗಳನ್ನು ತೆರವು ಮಾಡಲಾಯಿತು. ಮನೆಯ ಮೇಲೆ ಬಿದ್ದ ಮರ ಹಾಗು ರಸ್ತೆಯ ಮೇಲಿದ್ದ ಮರವನ್ನು ತೆರವು ಮಾಡಲಾಯಿತು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.