ಸುಳ್ಯ: ಒಂದೆಡೆ ಶ್ರೀದೇವಿಯ ಮುಂದೆ ಪುಟಾಣಿಗಳಿಗೆ ಅ.ಆ.ಇ.ಈ ಅಕ್ಷರಾಭ್ಯಾಸದ ಸಂಭ್ರಮ, ಇನ್ನೊಂದೆಡೆ ಮುಗ್ದ ಕಂಠದಿಂದ ಹೊರ ಹೊಮ್ಮುವ ಮಧುರ ಹಾಡುಗಳ, ನೃತ್ಯೋಲ್ಲಾಸದ ಕಲರವ, ಆಕರ್ಷಕ ಚಿತ್ರ ರಚನೆ, ಗೂಡು ದೀಪ ತಯಾರಿಕೆ.. ಹೀಗೆ ಭಾನುವಾರ ಸುಳ್ಯ ದಸರಾದ ಶ್ರೀ ಶಾರದಾಂಬಾ ವೇದಿಕೆ ಪೂರ್ತಿ ಮಕ್ಕಳದ್ದೇ ಕಲರವ, ಸಂಭ್ರಮ. ಸುಳ್ಯ ಶ್ರೀ ಶಾರದಾಂಬಾ
ದಸರಾ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ ನಡೆಯುತ್ತಿರುವ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ‘ಸುಳ್ಯ ದಸರಾ’ದಲ್ಲಿ ಇಂದು ಮಕ್ಕಳ ದಸರಾ ಸಂಭ್ರಮ.ಈ ಬಾರಿ ಹಲವು ವಿಶೇಷಗಳೊಂದಿಗೆ ಸುಳ್ಯ ದಸರಾ ಆಯೋಜಿಸಲಾಗುತ್ತಿದ್ದು ದಿನ ಪೂರ್ತಿ ಮಕ್ಕಳಿಗಾಗಿಯೇ ಮಕ್ಕಳ ದಸರಾ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.ಒಂಭತ್ತು ದಿನಗಳ ದಸರಾ ಉತ್ಸವದಲ್ಲಿ ನಿನ್ನೆ ಮಹಿಳಾ ದಸರಾ, ಇಂದು ವಿಜಯದಶಮಿಯಂದು ಮಕ್ಕಳ ದಸರಾ ಕಾರ್ಯಕ್ರಮ
ಹಮ್ಮಿಕೊಳ್ಳಲಾಯಿತು. ತಾಲೂಕಿನಾದ್ಯಂತ ಸುಮಾರು 500ಕ್ಕೂ ಹೆಚ್ಚು ಮಕ್ಕಳು ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಸ್ ನಿಲ್ದಾಣದ ಬಳಿಯಿಂದ ಶಾರದಾಂಬಾ ವೇದಿಕೆ ತನಕ ಅದ್ದೂರಿ ಮೆರವಣಿಗೆ ಮೂಲಕ ಮಕ್ಕಳನ್ನು ಕರೆ ತರಲಾಯುತು.ಬಳಿಕ ಮಕ್ಕಳಿಂದಲೇ ಮಕ್ಕಳ ದಸರಾ ಉದ್ಘಾಟನೆಗೊಂಡಿತು.
ಬಳಿಕ ವಿವಿಧ ಸ್ಪರ್ಧೆಗಳು ನಡೆಯಿತು.ಮಕ್ಕಳಿಗಾಗಿ ಛದ್ಮವೇಷ, ಭಾವಗೀತೆ, ಭಕ್ತಿಗೀತೆ, ಜನಪದ ಗೀತೆ, ಭರತ ನಾಟ್ಯ, ಸಮೂಹ ನೃತ್ಯ, ಡ್ರಾಯಿಂಗ್, ಗೂಡುದೀಪ ಸ್ಪರ್ಧೆಗಳು, ಫನ್ ಗೇಮ್ಗಳು, ಮನರಂಜನೆಗಳು, ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತಾಲೂಕಿನಾದ್ಯಂತ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ದಸರಾ ಉದ್ಘಾಟನೆ:
ಪ್ರತಿಭೆಗಳಾದ ಅವನಿ ಎಂ.ಎಸ್., ಮೌರ್ಯ ನಾರ್ಕೋಡು, ಸಿಂಚನ ಪುತ್ತಿಲ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾರದಾಂಬ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ಡೋಲು ಬಾರಿಸಿ ಮಕ್ಕಳ ದಸರಾ ಮೆರವಣಿಗೆ ಉದ್ಘಾಟಿಸಿದರು.ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ,ಶಾರದಾಂಬ ಉತ್ಸವ ಸಮಿತಿಯ ಅಧ್ಯಕ್ಷ ಡಾ. ಡಿ.ವಿ. ಲೀಲಾಧರ್, ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಗೋಕುಲ್ದಾಸ್, ಶ್ರೀ ಶಾರದಾಂಬ ಸೇವಾ ಸಮಿತಿಯ ಕೋಶಾಧಿಕಾರಿ ಅಶೋಕ್ನ ಪ್ರಭು, ಶ್ರೀ ಶಾರದಾಂಬ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಶ್ರೀ ಶಾರದಾಂಬ ದಸರಾ ಸೇವಾ
ಟ್ರಸ್ಟ್ ಖಜಾಂಜಿ ಬೂಡು ರಾಧಾಕೃಷ್ಣ ರೈ, ಶ್ರೀ ಶಾರದಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಶಾರದಾಂಬ ಉತ್ಸವ ಸಮಿತಿಯಗೌರವ ಸಲಹೆಗಾರರಾದ ಎನ್.ಜಯಪ್ರಕಾಶ್ ರೈ, ಎಂ.ವೆಂಕಪ್ಪ ಗೌಡ, ಮಧುಸೂಧನ ಕುಂಭಕ್ಕೋಡು,
ದಸರಾ ಉತ್ಸವ ಸಮಿತಿಯ ಖಜಾಂಜಿ ಸುನಿಲ್ ಕೇರ್ಪಳ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ.ಕೆ. ಸತೀಶ್, ಗೌರವ ಸದಸ್ಯರಾದ ತೀರ್ಥರಾಮ ಜಾಲ್ಸೂರು, ಶಾರದಾಂಬ ಉತ್ಸವ ಸಮಿತಿಯ ಉಪಾಧ್ಯಕ್ಷರಾದ ಸನತ್ ಪೆರಿಯಡ್ಕ, ಬಾಲಕೃಷ್ಣ ಎಸ್.ಬಿ.ಲ್ಯಾಬ್, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಗೌರವ ಸದಸ್ಯ ರವಿಚಂದ್ರ ಕೊಡಿಯಾಲಬೈಲು, ಶಾರದಾಂಬ ಮಹಿಳಾ ಸಮಿತಿಯ ಸಲಹೆಗಾರಾದ ಲತಾ ಮಧುಸೂಧನ, ಹರಿರಾಯ ಕಾಮತ್, ಲೋಕೇಶ್ ಊರುಬೈಲು, ಪೃಥ್ವಿಕುಮಾರ್.ಟಿ, ಶಶಿಧರ ಎಂ.ಜೆ, ಚಂದ್ರಶೇಖರ ಪಂಡಿತ್, ಪ್ರಸನ್ನ ಐವರ್ನಾಡು, ಶಶಿಕಾಂತ್ ಮಿತ್ತೂರು ಮತ್ತಿತರರು ಈ ಸಂದರ್ಭಗಳಲ್ಲಿ ಉಪಸ್ಥಿತರಿದ್ದರು.