ಕರಿಕೆ:ಕೊಡಗು ಜಿಲ್ಲೆಯ ಮಡಿಕೇರಿಯಿಂದ ಗಡಿ ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸಿದೆ. ಮಾ.16ರಿಂದ ಬಸ್ ಸಂಚಾರ ಆರಂಭಗೊಂಡಿದೆ. ಬಸ್ ಸಂಚಾರ ಆರಂಭಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮಾ.15ರಂದು ಕರಿಕೆಗೆ ಆಗಮಿಸಿದ್ದ
ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಶಾಸಕರ ನಿರ್ದೇಶನದಂತೆ ಮರು ದಿನವೇ ಬಸ್ ಸಂಚಾರ ಆರಂಭಗೊಂಡಿದೆ. ಬಸ್ಗೆ ಕರಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್ ನೇತೃತ್ವದಲ್ಲಿ ಸ್ವಾಗತ ನೀಡಲಾಯಿತು. ಪ್ರಮುಖರಾದ ರಮಾನಾಥ ಬೇಕಲ್, ಹರಿಪ್ರಸಾದ್ ಬೇಕಲ್, ಸುಬ್ರಹ್ಮಣಿ ಕಟ್ಟಕೋಡಿ ಮತ್ತಿತರರು ಉಪಸ್ಥಿತರಿದ್ದರು.
ಬಸ್ ವೇಳಾಪಟ್ಟಿ:
ಮಡಿಕೇರಿಯಿಂದ
7-30ಕ್ಕೆ : 10-15 ಕ್ಕೆ ಕರಿಕೆ.
10-30 ಕ್ಕೆ ಕರಿಕೆಯಿಂದ ಹೊರಟು
1-15ಕ್ಕೆ ಮಡಿಕೇರಿಗೆ.
1-00 ಗಂಟೆಗೆ ಮಡಿಕೇರಿಯಿಂದ ಹೊರಟು
3-45 ಕ್ಕೆ ಕರಿಕೆ.
4-00 ಕ್ಕೆ ಕರಿಕೆಯಿಂದ ಹೊರಟು
6-45ಕ್ಕೆ ಮಡಿಕೇರಿ.









