ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ಪ್ರಯುಕ್ತ ನಡೆದ ಮಾತೃಸಂಗಮ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿದರು.ಹಿಂದೂ ಐಕ್ಯ ವೇದಿ ಕೇರಳ ರಾಜ್ಯ ರಕ್ಷಾಧಿಕಾರಿ ಶಶಿಕಲಾ ಟೀಚರ್ ಪ್ರಧಾನ ಭಾಷಣ ಮಾಡಿದರು.ಸಮಾರಂಭದಲ್ಲಿ ಶ್ರೀ ಒಡಿಯೂರು ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನವಿತ್ತರು.ಮಾಣಿಲ ಶ್ರೀಧಾಮದ
ಶ್ರೀಮೋಹನದಾಸ್ ಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ಭಾಗವಹಿಸಿದ್ದರು.ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕಳ ಅಧ್ಯಕ್ಷತೆ ವಹಿಸಿದ್ದರು. ಶಕುಂತಳಾ ಯು.ಟಿ.ಆಳ್ವ, ಜಿ.ಪಂ.ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಧೂರು ಗ್ರಾ.ಪಂ.ಅಧ್ಯಕ್ಷೆ ಸ್ಮಿಜ, ಡಾ.ವೀಣಾ ಮಂಜುನಾಥ್, ಡಾ.ರಮ್ಯಾ ಎಸ್.ಉಳಿಯತ್ತಡ್ಕ, ಲೀಲಾವತಿ ವಿಶ್ಶನಾಥ ರೈ ಮಾಯಿಪಾಡಿ, ಉದ್ಯಮಿ ಬಿಂದುದಾಸ್, ಮೀರಾ ಕಾಮತ್ ಕಾಸರಗೋಡು, ಡಾ ಮಮತಾ ಶೆಟ್ಟಿ, ಮಧೂರು ಗ್ರಾ.ಪಂ.ಸದಸ್ಯೆಯರಾದ ರಾಧಾ.ಕೆ, ಜನನಿ ಟಿ.ಕೆ, ಸೌಮ್ಯ ದಿನೇಶ್, ಶ್ರೀಮತಿ ಟೀಚರ್, ಆಂಬಿಳಿ ಸಿ.ಎಂ, ಉಷಾ ಸುರೇಶ್, ಸ್ಮಿತಾ ಸುಧಾಕರನ್ ಮೊದಲಾದವರು ಉಪಸ್ಥಿತರಿದ್ದರು