ಸುಳ್ಯ: ಬಾನಂಗಳದಲ್ಲಿ ವಿಸ್ಮಯವಾಗಿ ಸಂಪೂರ್ಣ ಚಂದ್ರಗ್ರಹಣ. ಸೆ.7 ಭಾನುವಾರದಂದು ಪೂರ್ಣ ಚಂದ್ರ ಗ್ರಹಣ ಗೋಚರಿಸಿದೆ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ದೀರ್ಘ ಸಮಯದ ಗ್ರಹಣ ಗೋಚರಿಸಿದೆ. ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ನಡೆಯುವ ಈ
ನೆರಳಿನ ವಿಸ್ಮಯದಾಟವನ್ನು ಜನರು ಕಣ್ತುಂಬಿಕೊಂಡರು. ವಿವಿಧ ಕಡೆಗಳಲ್ಲಿ ಜನರು ಚಂದ್ರ ಗ್ರಹಣ ವೀಕ್ಷಿಸಿ, ಪೋಟೋ, ವೀಡಿಯೊ ಕ್ಲಿಕ್ಕಿಸಿ ಸಂಭ್ರಮಿಸಿದರು. ಭಾನುವಾರ ರಾತ್ರಿ 8.58ಕ್ಕೆ ಆರಂಭಗೊಂಡು 9.57ರ ವೇಳೆಗೆ ಭಾಗಶಃ ಗ್ರಹಣ ಪ್ರಕ್ರಿಯೆ ಗ್ರಹಣ ನಡೆದು 11.01ರಿಂದ 12.23ರ ಅವಧಿಯಲ್ಲಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸಿತು. ಸೋಮವಾರ ಮುಂಜಾನೆ 2.25ರ ತನಕ ಈ ನೆರಳಿನಾಟ ಮುಂದುವರಿಯಿತು.ಮುಂದಿನ ಸಂಪೂರ್ಣ ಚಂದ್ರಗ್ರಹಣವು 2028ರ ಡಿ.31ರಂದು ನಡೆಯಲಿದೆ.








