ಬೆಂಗಳೂರು: ಇಂದು ಈ ವರ್ಷದ ಕೊನೆಯ ಚಂದ್ರ ಗ್ರಹಣ ನಡೆಯಲಿದೆ.ಇಂದು ರಾತ್ರಿ 11.30ರಿಂದ ಚಂದ್ರಗ್ರಹಣ ಆರಂಭವಾಗಲಿದೆ. ಇಂದು ಮಧ್ಯರಾತ್ರಿ ವೇಳೆಗೆ ಭಾರತದ ಎಲ್ಲಾ ಸ್ಥಳಗಳಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ. ರಾತ್ರಿ 11.30ಕ್ಕೆ ಆರಂಭವಾಗುವ ಚಂದ್ರಗ್ರಹಣ ನಾಳೆ ಬೆಳಗಿನ ಜಾವ 3.36 ನಿಮಿಷಕ್ಕೆ ಕೊನೆಗೊಳ್ಳುತ್ತದೆ. 14 ದಿನಗಳ ಹಿಂದಷ್ಟೇ
ಸೂರ್ಯಗ್ರಹಣ ಸಂಭವಿಸಿತ್ತು ಆದ್ರೆ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗಿರಲಿಲ್ಲ. ಇದೀಗ ಸೂರ್ಯಗ್ರಹಣ ಸಂಭವಿಸಿದ ಎರಡು ವಾರಗಳ ಬೆನ್ನಲ್ಲೇ ಚಂದ್ರಗ್ರಹಣ ಸಂಭವಿಸುತ್ತಿದೆ ಈ ವರ್ಷದ ಎರಡನೇ ಮತ್ತು ಕೊನೆಯ ಚಂಗ್ರಹಣ ಇದಾಗಿದೆ.ಅಕ್ಟೋಬರ್ 28ರ ರಾತ್ರಿ 11.30ಕ್ಕೆ ಚಂದ್ರಗ್ರಹಣ ಆರಂಭವಾಗಿ ಅಕ್ಟೋಬರ್ 29ರ ಬೆಳಗ್ಗಿನ ಜಾವಾ 3.36ಕ್ಕೆ ಚಂದ್ರಗ್ರಹಣ ಅಂತ್ಯವಾಗಲಿದೆ.ಮಧ್ಯರಾತ್ರಿಯ ಬಳಿಕ ಭಾರತದ ವಿವಿಧ ಸ್ಥಳಗಳಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ.
ಭಾರತ, ಬೆಲ್ಜಿಯಂ, ಗ್ರೀಸ್, ಫಿನ್ಲ್ಯಾಂಡ್, ಪೋರ್ಚುಗಲ್, ಥೈಲ್ಯಾಂಡ್, ಹಂಗೇರಿ, ಈಜಿಪ್ಟ್, ಟರ್ಕಿ, ಇಂಡೋನೇಷ್ಯಾ, ಇಟಲಿ, ಮಯನ್ಮಾರ್, ಸ್ಪೇನ್ ಸೇರಿ ಹಲವು ದೇಶಗಳಲ್ಲಿ ಚಂದ್ರ ಗ್ರಹಣ ಗೋಚರಿಸಲಿದೆ.
ಚಂದ್ರಗ್ರಹಣ ಹುಣ್ಣಿಮೆಯ ದಿನ ಸಂಭವಿಸುತ್ತದೆ. ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ನಿಖರವಾಗಿ ಸ್ಥಾನ ಪಡೆದಾಗ ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಬೀಳುತ್ತದೆ. ಆಗ ಚಂದ್ರ ಕೆಲ ಸಮಯ ಮರೆಯಾಗುತ್ತಾನೆ. ಚಂದ್ರನ ಮೇಲ್ಮೈ ಕೆಂಪು ಬಣ್ಣಕ್ಕೆ ತಿರುಗುತ್ತದೆ.