ನವದೆಹಲಿ: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಮೇ 25 ರಂದು ನಡೆಯಲಿದ್ದು, 8 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ 58 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಬಿಹಾರ (8 ), ಹರಿಯಾಣ (10), ಜಮ್ಮು ಮತ್ತು ಕಾಶ್ಮೀರ (1), ಜಾರ್ಖಂಡ್ (4) ದೆಹಲಿ (7), ಒಡಿಶಾ (6), ಉತ್ತರಪ್ರದೇಶ (14) ಮತ್ತು ಪಶ್ಚಿಮ ಬಂಗಾಳ(8)ದಲ್ಲಿ ಮತದಾನ ಮತದಾನ ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರದ
ಅನಂತನಾಗ್– ರಜೌರಿಯಲ್ಲಿ 3ನೇ ಹಂತದಲ್ಲಿ ಮುಂದೂಡಲಾಗಿದ್ದ ಚುನಾವಣೆಯನ್ನು ಈಗ 6ನೇ ಹಂತದಲ್ಲಿ ನಡೆಸಲಾಗುತ್ತಿದೆ.ಇಲ್ಲಿಯವರೆಗೆ, 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 543 ಕ್ಷೇತ್ರಗಳಲ್ಲಿ 428 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದೆ. ಕೊನೆಯ ಹಂತದ ಮತದಾನ ಜೂನ್ 1 ರಂದು ನಿಗದಿಯಾಗಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
ಆರನೇ ಹಂತದ ಬಹಿರಂಗ ಪ್ರಚಾರ ಗುರುವಾರ ಸಂಜೆ ಕೊನೆಗೊಂಡಿತು.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
ಸಂಬಲ್ಪುರದಿಂದ (ಒಡಿಶಾ) ಧರ್ಮೇಂದ್ರ ಪ್ರಧಾನ್ (ಬಿಜೆಪಿ),ಈಶಾನ್ಯ ದೆಹಲಿಯಿಂದ ಮನೋಜ್ ತಿವಾರಿ (ಬಿಜೆಪಿ) ಮತ್ತು ಕನ್ಹಯ್ಯಾ ಕುಮಾರ್ (ಕಾಂಗ್ರೆಸ್),ಸುಲ್ತಾನ್ಪುರದಿಂದ ಮೇನಕಾ ಗಾಂಧಿ (ಬಿಜೆಪಿ),
ಅನಂತನಾಗ್-ರಾಜೌರಿ (ಜಮ್ಮು ಮತ್ತು ಕಾಶ್ಮೀರ)ದಿಂದ ಮೆಹಬೂಬಾ ಮುಫ್ತಿ (ಪಿಡಿಪಿ),ತಮ್ಲುಕ್ನಿಂದ (ಪಶ್ಚಿಮ ಬಂಗಾಳ) ಅಭಿಜಿತ್ ಗಂಗೋಪಾಧ್ಯಾಯ (ಬಿಜೆಪಿ),ಬಿಜೆಪಿಯ ಮನೋಹರ್ ಲಾಲ್ ಖಟ್ಟರ್ (ಕರ್ನಾಲ್, ಹರಿಯಾಣ),ನವೀನ್ ಜಿಂದಾಲ್ (ಕುರುಕ್ಷೇತ್ರ)
ರಾವ್ ಇಂದರ್ಜಿತ್ ಸಿಂಗ್ (ಗುರ್ಗಾಂವ್).