ಮಂಗಳೂರು: ಈ ಪೋರ್ಟಲ್ ಮೂಲಕ 24 ಗಂಟೆಯಲ್ಲಿ ಕಾಣೆಯಾದ 7 ಮೊಬೈಲ್ ಫೋನ್ಗಳನ್ನು ಪತ್ತೆ ಹಚ್ಚಿ ಪೊಲೀಸ್ ಇಲಾಖೆ ವಾರಿಸುದಾರರಿಗೆ ಹಸ್ತಾಂತರಿಸಲಾಗಿದೆ. 4 ಮೊಬೈಲ್ ಫೋನ್ ಗಳನ್ನು CEN ಅಪರಾಧ ಪೊಲೀಸ್ ಠಾಣೆ, ಸುಳ್ಯ, ಉಪ್ಪಿನಂಗಡಿ, ಪುತ್ತೂರು ಟೌನ್, ಪೊಲೀಸ್ ಠಾಣಾ ಠಾಣಾಧಿಕಾರಿಗಳು ವಾರಸುದಾರರಿಗೆ ಹಸ್ತಾಂತರಿಸಿರುತ್ತಾರೆ ಎಂದು ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ
ಪ್ರಕಟಣೆ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಕಳವಾದ/ಕಳೆದು ಹೋದ /ಸುಲಿಗೆಯಾದ ಮೊಬೈಲ್ ಫೋನ್ ಗಳ ದುರ್ಬಳಕೆಯನ್ನು ತಡೆಗಟ್ಟಲು ಅಂತಹ ಮೊಬೈಲ್ ಫೊನ್ ಗಳನ್ನು ಬ್ಲಾಕ್ ಮಾಡುವ ನೂತನ ವ್ಯವಸ್ಥೆ CEIR Portal ಅನ್ನು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಇಲಾಖೆಯಿಂದ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಈ ಪೋರ್ಟಲ್ ಮೂಲಕ 24 ಗಂಟೆಯಲ್ಲಿ 7 ಕಾಣೆಯಾದ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಲಾಗಿದೆ.
ಮೊಬೈಲ್ ಕಳೆದುಹೋದರೆ, ಕಳವಾದರೆ, ಸುಲಿಗೆ ಯಾದರೆ ತಕ್ಷಣವೇ E-LOST ಮೂಲಕ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ, ಸ್ವೀಕೃತಿ ಪಡೆದು ನಂತರ ಮಾಹಿತಿಯನ್ನು CEIR ಪೋರ್ಟಲ್ ನಮೂದಿಸುವುದು. ಇದರಿಂದ ಕಳೆದು ಹೋದ, ಕಳವಾದ, ಸುಲಿಗೆ ಯಾದ ಮೊಬೈಲ್ ಫೋನ್ ಗಳ ದುರ್ಬಳಕೆ ತಡೆಗಟ್ಟಲು ಹಾಗೂ ಅವುಗಳನ್ನು ತಕ್ಷಣ ಪತ್ತೆ ಹಚ್ಚಲು ಅನುಕೂಲವಾಗುತ್ತದೆ.
ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.