ಬೆಂಗಳೂರು: ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದ್ದು, ಶೇ 69.23ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
14 ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಅತೀ ಹೆಚ್ಚು ಅಂದರೆ
ಶೇ 81.48 ಹಾಗೂ ಬೆಂಗಳೂರು ಕೇಂದ್ರದಲ್ಲಿ ಅತಿ ಕಡಿಮೆ ಅಂದರೆ ಶೇ 52.8ರಷ್ಟು ಮತದಾನವಾಗಿದೆ. 14 ಕ್ಷೇತ್ರಗಳ ಶೇಕಡವಾರು ಮತದಾನ ಹೀಗಿದೆ
ಉಡುಪಿ– ಚಿಕ್ಕಮಗಳೂರು: ಶೇ 76.06,
ಹಾಸನ: ಶೇ 77.51
ದಕ್ಷಿಣ ಕನ್ನಡ: ಶೇ 77.43
ಚಿತ್ರದುರ್ಗ: ಶೇ 73.11
ತುಮಕೂರು: 77.70
ಮಂಡ್ಯ: 81.48
ಮೈಸೂರು: 70.45
ಚಾಮರಾಜನಗರ: 76.59
ಬೆಂಗಳೂರು ಗ್ರಾಮಾಂತರ: 67.29
ಬೆಂಗಳೂರು ಉತ್ತರ: 54.42
ಬೆಂಗಳೂರು ಕೇಂದ್ರ: 52.81
ಬೆಂಗಳೂರು ದಕ್ಷಿಣ: 53.15
ಚಿಕ್ಕಬಳ್ಳಾಪುರ: 76.82
ಕೋಲಾರ: 78.06