ಸುಳ್ಯ: ಲೋಕಸಭಾ ಚುನಾವಣೆಗೆ ಮತದಾನ ಆರಂಭಗೊಂಡಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಬೂತ್ಗಳಲ್ಲಿಯೂ ಆರಂಭವಾಗಿದೆ. ಇವಿಎಂನ ತಾಂತ್ರಿಕ ಸಮಸ್ಯೆಯಿಂದ ಕೆಲವು ಬೂತ್ಗಳಲ್ಲಿ ಮತದಾನ ಆರಂಭ ಸ್ವಲ್ಪ ವಿಳಂಬ ಆಗಿರುವ ಬಗ್ಗೆ ವರದಿಗಳಿವೆ.ಕೆಲವು ಬೂತ್ಗಳಲ್ಲಿ ಬೆಳಿಗ್ಗಿನಿಂದಲೇ
ಮತದಾರರ ಸರತಿ ಸಾಲು ಕಂಡು ಬಂದಿದೆ. ದ.ಕ.ಕ್ಷೇತ್ರದಾದ್ಯಂತ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮತದಾನ ಆರಂಭವಾಗಿದ್ದು ಸರತಿ ಸಾಲು ಕಂಡು ಬಂದಿದೆ. ದ.ಕ.ಕ್ಷೇತ್ರದಲ್ಲಿ 1876 ಬೂತ್ಗಳಲ್ಲಿ ಮತದಾನ ನಡೆಯುತಿದೆ.
ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು ಹದಿಮೂರು ರಾಜ್ಯಗಳ 88 ಕ್ಷೇತ್ರಗಳಲ್ಲಿ ಮತದಾನ ಶುಕ್ರವಾರ ಬೆಳಿಗ್ಗೆ ಆರಂಭವಾಗಿದೆ. 88 ಕೇತ್ರಗಳಲ್ಲಿ 1200 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗಿದೆ.ಕೇರಳದ ಎಲ್ಲ 20 ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ಆರಂಭವಾಗಿದ್ದು, ಮತಗಟ್ಟೆಗಳ ಹೊರಗೆ ದೊಡ್ಡ ಸರದಿ ಸಾಲುಗಳು ಬೆಳಿಗ್ಗೆಯಿಂದಲೇ ಕಾಣಿಸುತ್ತಿವೆ.
ಕೇರಳದ 20, ಕರ್ನಾಟಕದ 14, ರಾಜಸ್ಥಾನದ 13, ಉತ್ತರಪ್ರದೇಶದ 8, ಮಹಾರಾಷ್ಟ್ರದ 8, ಮಧ್ಯಪ್ರದೇಶದ 6, ಅಸ್ಸಾಂನ 5 ಲೋಕಸಭಾ ಸ್ಥಾನಗಳು ಸೇರಿದಂತೆ 88 ಕ್ಷೇತ್ರಗಳಿ ಚುನಾವಣೆ ನಡೆಯುತಿದೆ.