ನವದೆಹಲಿ:ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ರೂ
60 ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ದರ ರೂ 114.5 ಏರಿಸಲಾಗಿದೆ.ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ತೈಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದ ನೇರ ಪರಿಣಾಮ ದರ ಏರಿಕೆಯಾಗಿದೆ. ದರ ಏರಿಕೆಯೊಂದಿಗೆ
ಸಬ್ಸಿಡಿಯೇತರ 14.2 ಕೆ.ಜಿ ಗೃಹ ಬಳಕೆಯ ಸಿಲಿಂಡರ್ ದರ ದೆಹಲಿಯಲ್ಲಿ 913ಗೆ ತಲುಪಿದೆ. ಈ ಹಿಂದೆ 853 ಇತ್ತು.ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎಲ್ಪಿಜಿ ದರ ಏರಿಕೆಯಾಗುತ್ತಿರುವುದು ಇದು ಎರಡನೇ ಬಾರಿ.ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಲ್ಬಣಗೊಂಡಿರುವ ಜಾಗತಿಕ ತೈಲ ಬಿಕ್ಕಟ್ಟಿನ ಪರಿಣಾಮವೇ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗಿದೆ.ಇಂದಿನಿಂದಲೇ (ಮಾ.7) ಪರಿಷ್ಕೃತ ದರ ಜಾರಿಗೆ ಬರಲಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ 50 ಏರಿಕೆ ಮಾಡಲಾಗಿತ್ತು.
19 ಕೆ.ಜಿ.ಯ ವಾಣಿಜ್ಯ ಬಳಕೆ ಸಿಲಿಂಡರ್ ದರ ಈ ವರ್ಷ 302.50 ಏರಿಕೆಯಾಗಿದೆ. ಮಾರ್ಚ್ 1 ರಂದಷ್ಟೇ ಸಿಲಿಂಡರ್ಗೆ 28 ಏರಿಕೆ ಮಾಡಲಾಗಿತ್ತು.









