ಸುಳ್ಯ:ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಎ.ಒ.ಎಲ್.ಇ ಇದರ ಕಾರ್ಯದರ್ಶಿ ಹೇಮನಾಥ್ ಕೆ.ವಿ. ಇವರು ಧ್ವಜಾರೋಹಣ ಮಾಡಿ ಇಂದಿನ ಯುವ ಜನಾಂಗವು ಕಾನೂನಿನ ಮಹತ್ವವನ್ನು
ಅರಿತು ದೇಶದ ಶಕ್ತಿಯಾಗಿ ರೂಪೂಗೂಂಡು ರಾಷ್ಟ್ರದ ನಿರ್ಮಾಣದಲ್ಲಿ ಕೈಜೋಡಿಸಬೇಕು” ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಎ.ಒ.ಎಲ್.ಇ ಇದರ ಸಲಹೆಗಾರರಾದ ಪ್ರೊ. ಕೆ.ವಿ. ದಾಮೋದರ ಗೌಡ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ.ಬಿ ಕಾಲೇಜಿನ ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.