ಸುಳ್ಯ: ಸಿಬಿಎಸ್ಸಿ ಹತ್ತನೇ ತರಗತಿ ಹಾಗೂ 12 ನೇ ತರಗತಿಯ ಫಲಿತಾಂಶ ಮೇ.12 ರಂದು ಪ್ರಕಟಗೊಂಡಿದೆ. ಸುಳ್ಯದ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ಗೆ 10 ನೇ ತರಗತಿಯಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 53 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. 32 ವಿದ್ಯಾರ್ಥಿಗಳು ಅತ್ಯುನ್ನತ
ಅಭಿಜ್ಞಾ ಎಸ್.ಭಟ್
ಶ್ರೇಣಿಯಲ್ಲಿ, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಒಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಭಿಜ್ಞಾ ಎಸ್.ಭಟ್ 600 ರಲ್ಲಿ 575 ಅಂಕ ಪಡೆದು( 95.8%) ಪ್ರಥಮ ಶ್ರೆಣಿಯಾಗಿದ್ದಾರೆ. ಸೃಜನಾ ಬಿ.ಎಸ್. 550(91.7) ಅಂಕ ಪಡೆದಿದ್ದಾರೆ. ಅಭಿಜ್ಞಾ ಎಸ್.ಭಟ್ ಡಾ.ರವಿಶಂಕರ ಭಟ್ ಅವರ ಪುತ್ರಿ. ಸೃಜನಾ ಬಿ.ಎಸ್.ಮಂಡೆಕೋಲಿನ ಶುಭಕರ ಬೊಳುಗಲ್ಲು ಹಾಗೂ ಗೀತಾಂಜಲಿ ಟಿ.ಜಿ. ಅವರ ಪುತ್ರಿ ಕೆವಿಜಿ ಐಪಿಎಸ್ ನಿರಂತರ 10ನೇ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿದೆ.
ಸೃಜನಾ ಬಿ.ಎಸ್.
ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸ್ಕೂಲ್ನ ಆಡಳಿತ ಮಂಡಳಿ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ, ಡಾ.ಜ್ಯೋತಿ ಆರ್.ಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ. ಪ್ರಾಂಶುಪಾಲರಾದ ಅರುಣ್ಕುಮಾರ್ ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು , ಉಪನ್ಯಾಸಕರು, ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.