ಸುಳ್ಯ: ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಪ್ರೀಕೆಜಿ, ಎಲ್ ಕೆ ಜಿ ಮತ್ತು ಯು ಕೆ ಜಿ ಯ ಮಕ್ಕಳಿಗಾಗಿ ಹಣ್ಣುಗಳ ದಿನವನ್ನಾಗಿ ಅ.17ರಂದು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಶುಭ ಹಾರೈಸಿದರು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ‘ ಹಣ್ಣುಗಳ ಮಹತ್ವದ ಬಗ್ಗೆ
ತಿಳಿಸಿ, ಅದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು’ ತಿಳಿಸಿದರು. ಬಳಿಕ ಮಾತನಾಡಿದ ಉಪ ಪ್ರಾಂಶುಪಾಲೆ ಶಿಲ್ಪಬಿದ್ದಪ್ಪ ‘ ದಿನಕ್ಕೆ ಒಂದು ಹಣ್ಣನ್ನು ತಿನ್ನಬೇಕು. ಇದರಿಂದ ನಮ್ಮ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು ದೊರಕುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಪ್ರತಿ ಪೋಷಕರು ಹಣ್ಣುಗಳ ಅಲಂಕಾರದೊಂದಿಗೆ ತಮ್ಮ ಮಕ್ಕಳನ್ನು ಕಳುಹಿಸಿಕೊಟ್ಟರು. ಮಕ್ಕಳೆಲ್ಲರೂ ತಾವು ತಂದ ಹಣ್ಣುಗಳ ಮಹತ್ವದ ಬಗ್ಗೆ ತಿಳಿಸಿದರು.ಬಳಿಕ ವಿದ್ಯಾರ್ಥಿಗಳು ತಂದ ಹಣ್ಣುಗಳನ್ನು ಕಿಂಡರ್ ಗಾರ್ಡನ್ ನ ಎಲ್ಲಾ ಮಕ್ಕಳು ಮತ್ತು ಎಲ್ಲಾ ಶಿಕ್ಷಕ – ಶಿಕ್ಷಕೇತರವೃಂದದವರಿಗೆ ಹಂಚಲಾಯಿತು. ಹರ್ಷಿತ ಕಾರ್ಯಕ್ರಮ ನಿರೂಪಿಸಿ ನೀಲವೇಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.