ಸುಳ್ಯ: ಕೆ.ವಿ.ಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2022-2023ನೇ ಸಾಲಿನ ವಾರ್ಷಿಕ ಮಹಾಸಭೆಯು ಶನಿವಾರ ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ ಅವರ ಅಧ್ಯಕ್ಷತೆಯಲ್ಲಿ ಕೆ.ವಿ.ಜಿ. ಐ.ಪಿ.ಎಸ್ ಸಭಾಂಗಣದಲ್ಲಿ ನಡೆಯಿತು. ಬಳಿಕ ಮಾತನಾಡಿದ ಡಾ.ರೇಣುಕಾಪ್ರಸಾದ್ ‘ಸಹಕಾರ ಸಂಘದ ಬೆಳವಣಿಗೆಗಳ ವಿವರಿಸಿದರು. ಪ್ರಸ್ತುತ ವರ್ಷ ಸದಸ್ಯರಿಗೆ ಶೆ. 6 ಡಿವಿಡೆಂಟ್ ನೀಡುವುದಾಗಿ
ಘೋಷಣೆ ಮಾಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಚಿದಾನಂದ ಬಾಳಿಲ, ನಿರ್ದೇಶಕರಾದ ಡಾ. ಜ್ಯೋತಿ ಆರ್. ಪ್ರಸಾದ್, ಡಾ.ಉಜ್ವಲ್ ಯು.ಜೆ ಊರುಬೈಕು, ಡಾ. ಮನೋಜ್ ಕುಮಾರ್ ಅಡ್ಡಂತಡ್ಕ, ಭವಾನಿಶಂಕರ್ ಅಡ್ತಲೆ, ನೇತ್ರಾವತಿ ಎಸ್.ಎನ್., ಶಿವರಾಮ ಕೇರ್ಪಳ, ದಯಾನಂದ ಅಟ್ಲೂರು, ಪದ್ಮನಾಭ ಕೆ.ಜೆ. ಪ್ರಸನ್ನ ಕಲ್ಲಾಜೆ, ನಾಗೇಶ್ ಕೊಚ್ಚಿ, ಮಾಧವ ಬಿ.ಟಿ., ಸುಬ್ರಮಣ್ಯ ಕೆ.ಬಿ,ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ .ಕೆ ಉಪಸ್ಥಿತರಿದ್ದರು.
ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹಾಗೂ
ಹಿರಿಯ ಸಹಕಾರಿ ಸೂರಯ್ಯ ಸೂಂತೋಡು ಅನಿಸಿಕೆ ವ್ಯಕ್ತಪಡಿಸಿ ಸಂಸ್ಥೆಯ ಬೆಳವಣಿಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಸಭೆಯಲ್ಲಿ ಗೌರವ ಸಲಹೆಗಾರರಾದ ಮನಮೋಹನ್ ಕುರುಂಜಿ ಅವರನ್ನು ಗೌರವಿಸಲಾಯಿತು.
ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಕೃಷ್ಣರಾಜ್ ಕೇರ್ಪಳ ಪ್ರಾರ್ಥಿಸಿದರು. ಉಪಾಧ್ಯಕ್ಷ ಚಿದಾನಂದ ಬಾಳಿಲ ಸ್ವಾಗತಿಸಿ, ಮಾಧವ ಬಿ.ಟಿ ವಂದಿಸಿದರು. ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.