ಸುಳ್ಯ:ಕೆವಿಜಿ ಅಮರಜ್ಯೋತಿಯಲ್ಲಿ ಆಗಸ್ಟ್ 7ರಂದು ಡಾ.ಕುರುಂಜಿ ವೆಂಕಟ್ರಮಣ ಗೌಡರ 12ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ದಿ. ಜಾನಕಿ ವೆಂಕಟ್ರಮಣ ಕುರುಂಜಿ ಅವರ ಸಂಸ್ಮರಣೆ ಮಾಡಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ಅವರು ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿದರು. ಎಲ್ಲಾ ಸಿಬ್ಬಂದಿಗಳು ಹಾಗೂ

ವಿದ್ಯಾರ್ಥಿ ಪ್ರತಿನಿಧಿಗಳು ಮೌನ ಪ್ರಾರ್ಥನೆ ಮಾಡುವ ಮೂಲಕ ನಮನ ಸಲ್ಲಿಸಿದರು.ಇಂಗ್ಲಿಷ್ ಉಪನ್ಯಾಸಕಿ ಮಲ್ಲಿಕಾ ಎಂ ಎಲ್ ಕೆವಿಜಿ ಸಂಸ್ಮರಣಾ ಭಾಷಣ ಮಾಡಿ ಡಾ.ಕೆ.ವಿ.ಜಿ ಹಲವು ಆಯಾಮಗಳ ಕಾರ್ಯ ಹಾಗೂ ಸಾಧನೆಯ ಜೊತೆಗೆ ಅವರು ಶಿಕ್ಷಣತಜ್ಞ, ಸಮಾಜ ಸುಧಾರಕ, ತತ್ವಜ್ಞಾನಿ, ಮಹಾನ್ ಬೋಧಕ, ಸಮರ್ಥ ಆಡಳಿತಗಾರ ಮತ್ತು ಮಹಾನ್ ಲೋಕೋಪಕಾರಿ ಗುಣಗಳಿಂದ
ಸುಳ್ಯದ ಚಿತ್ರಣ ಬದಲಿಸಿದವರು ಎಂದು ಬಣ್ಣಸಿದರು.ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟ್ ಡಾ. ರೇಣುಕಾ ಪ್ರಸಾದ್ ಕೆ ವಿ,ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್ ಹಾಗೂ ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ ಕಾರ್ಯಕ್ರಮಕ್ಕೆ ಸಂದೇಶ ನೀಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್, ಹಾಗೂ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.









