ಸುಳ್ಯ:ಸುಳ್ಯದ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ನೂತನ ನಾಯಕರ ಪದಗ್ರಹಣ, ಸದ್ಭಾವನಾ ದಿನಾಚರಣೆ ಮತ್ತು ರಕ್ಷಾ ಬಂಧನ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ
ನಡೆಯಿತು.ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ಅಧ್ಯಕ್ಷತೆ ವಹಿಸಿ ರಕ್ಷಾಬಂಧನದ ಸಂದೇಶ ನೀಡಿದರು. ಉಪಪ್ರಾಂಶುಪಾಲ ಶ್ರೀಧರ್ ಎಂ.ಕೆ, ಅಕಾಡೆಮಿಕ್ ಡೀನ್ ಚಂದ್ರಶೇಖರ ಎಂ.ಎನ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಸುನಿಲ್ ಕುಮಾರ್ ಎನ್.ಪಿ. ಸದ್ಭಾವನಾ ಪ್ರತಿಜ್ಞಾ ವಿಧಿ ಬೋಧಿಸಿದರು. ಚಂದ್ರಶೇಖರ ಬಿಳಿನೆಲೆ ನೂತನ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಸಮಾರಂಭದಲ್ಲಿ ಕಾಲೇಜಿನ ಸ್ವಚ್ಛತಾ ರಾಯಬಾರಿಯಾಗಿ ಗುರುತಿಸಿಕೊಂಡಿರುವ ಹಾಗೂ ಎನ್.ಎಸ್.ಎಸ್.ಶಿಬಿರಗಳಲ್ಲಿ ಹಣ್ಣಿನ ಗಿಡ ನೆಟ್ಟು ಪ್ರೊತ್ಸಾಹ ನೀಡುತ್ತಿರುವ ಮೋನಪ್ಪ ಗೌಡ ಕಾಟೂರು ಇವರನ್ನು ಸನ್ಮಾನಿಸಲಾಯಿತು.
ನಾಯಕಿಯರಾದ ರಕ್ಷಿತಾ ಸ್ವಾಗತಿಸಿ , ಜೇಷ್ಮಾ ವಂದಿಸಿದರು. ಗೀತಾಂಜಲಿ ಕಾರ್ಯಕ್ರಮ ನಿರೂಪಿಸಿದರು.ಸಮಾರಂಭದ ನಂತರ ನೂತನ ಸ್ವಯಂ ಸೇವಕರಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.