ಸುಳ್ಯ:ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿಗೆ 1992ರಲ್ಲಿ ದಾಖಲಾದ ವಿದ್ಯಾರ್ಥಿಗಳ 32ನೇ ವರ್ಷದ ಪುನರ್ಮಿಲನ ಸಮ್ಮೇಳನವು ಬೆಂಗಳೂರಿನ ಕೋರಮಂಗಲ ಕ್ಲಬ್ನಲ್ಲಿ ನಡೆಯಿತು. ಈ ಸಮಾರಂಭಕ್ಕೆ ಯು.ಎ.ಇ., ಯು.ಎಸ್.ಎ ಮತ್ತು ಇತರ ದೇಶಗಳಿಂದ ಹಳೆವಿದ್ಯಾರ್ಥಿಗಳು ಆಗಮಿಸಿದ್ದರು. ಸಂಸ್ಥೆಯ ಉಪಪ್ರಾಂಶುಪಾಲರು ಹಾಗೂ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ. ಶ್ರೀಧರ್ ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾಲೇಜಿನ
ಮಾಜಿ ಪ್ರಾಧ್ಯಾಪಕರಾದ ಪ್ರೊ. ನಂದಾ ಹೆಚ್.ಎಸ್. ಪ್ರಾಂಶುಪಾಲರು ಬಿ.ಟಿ.ಐ., ಬೆಂಗಳೂರು, ಪ್ರೊ. ರವಿಕಿರಣ್, ಪ್ರಾಧ್ಯಾಪಕರು ಎಸ್.ಎಸ್.ಐ.ಟಿ. ತುಮಕೂರು, ವಾಸುಕಿ ನಾಗರಾಜ್, ಮಾಜಿ ವೃತ್ತಿಪರ ಸಾಫ್ಟ್ವೇರ್ ಉದ್ಯೋಗಿ, ಶಂಕರ್ ಕಾರಂತ್, ಉದ್ಯೋಗಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಬೆಂಗಳೂರು, ರೇಖಾನಂದ, ಅನಿತಾ ಶರತ್, ಸಲಹೆಗಾರರು, ಸಮಾಧಾನ್ ಸಂಸ್ಥೆ ಹಾಗೂ ಸುದರ್ಶನ್ ಹಾಗೂ
ಹಳೆ ವಿದ್ಯಾರ್ಥಿಗಳಾದ ಭಾರತದಿಂದ ವಾಣಿಜ್ಯೋದ್ಯಮಿ ವೆಂಕಟೇಶ್ ಎಂ.ಎಸ್. ಮತ್ತು ದಯಾನಂದ ಸಾಗರ ಯುನಿವರ್ಸಿಟಿಯ ಪ್ರಾಧ್ಯಾಪಕಿ ಜಯವೃಂದ ಹಾಗೂ ಯು.ಎ.ಇ.ಯಿಂದ ಉದ್ಯಮಿಗಳಾದ ರಿಜುಮೋನ್ ಮತ್ತು ಗೋಕುಲ್ನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾಣಿಜ್ಯೋದ್ಯಮಿ ವೆಂಕಟೇಶ್ ಎಂ.ಎಸ್. ಗಣ್ಯರನ್ನು ಹಾಗೂ ಸಭಿಕರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಹಳೆವಿದ್ಯಾರ್ಥಿಗಳಾದ ಜಯವೃಂದ ಹಾಗೂ ಜಾನ್ಸನ್ ಜೋಸ್, ಹಾಗೂ ರಾಘವೇಂದ್ರ ಕೋಟೆಗಾರ್, ಆಪರೇಶನ್ಸ್ ಹೆಡ್, ಏರೋಸ್ಪೇಸ್ ಕಂಪೆನಿ, ಕಾಲೇಜಿನ ಮಾಜಿ ಪ್ರಾಧ್ಯಾಪಕರನ್ನು ಗುರುತಿಸಿ ಗೌರವಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿಗಳಲ್ಲೋರ್ವರಾದ ಭಾರತೀಯ ಸೇನೆಯ ಬ್ರಿಗೇಡಿಯರ್ ವಿಶ್ವನಾಥ್ ಸಿಂಗ್ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ದುಬೈ ನಿವಾಸಿಯಾದ ಡಾ. ಅಪರ್ಣಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಫನ್ ಗೇಮ್ಸ್ ಮತ್ತು ಡಿ.ಜೆ. ಯನ್ನು ಆಯೋಜಿಸಲಾಗಿತ್ತು. ಸುಮಾರು 150 ವಿದ್ಯಾರ್ಥಿಗಳು ತಮ್ಮ ಕುಟುಂಬದವರೊಂದಿಗೆ ಭಾಗವಹಿಸಿದ್ದರು.