ಸುಳ್ಯ:ಬ್ರಹ್ಮಗಿರಿ ಸಹೋದಯ ಕಾಂಪ್ಲೆಕ್ಸ್ ಕೊಡಗು ಇದರ ನೇತೃತ್ವದಲ್ಲಿ ಸೈನಿಕ ಶಾಲೆ ಕೊಡಗು ಇಲ್ಲಿ ನಡೆದ ಇಂಟರ್ ಸಿ ಬಿ ಎಸ್ ಇ ಸ್ಕೂಲ್ ಫುಟ್ಬಾಲ್ ಸ್ಪರ್ಧೆಯಲ್ಲಿ ಸೀನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ
10ನೇ ತರಗತಿಯ ಪ್ರಥಮ್ ಪಿ ಶೆಟ್ಟಿ, ಉತ್ಸವ್ ಯು. ಯು, ಅನಿಶ್ ಕೆ ಎ, ಚಮನ್ ಕೆ, ಚಿರಾಯು ವೈ ಶೆಟ್ಟಿ, ಯೂಸುಫ್ ಇಮ್ರಾನ್, ಮಹಮ್ಮದ್ ತೌಶಿಫ್, ಅದ್ವೈತ್ ಕೆ ಪಿ, ವಿಶ್ವಾಸ್ ಗೌಡ ಎಂ, ಅಮಿರುದ್ದೀನ್ ಅಹಮದ್ ಶರೀಫ್, ಧ್ರುವ 9ನೇ ತರಗತಿಯ ತಸ್ಮಯಿ ಪಿ ಗೌಡ, ವಿಶಾಲ್ ಕರುಣ್ ಪಿ, ಶ್ರೀ ಹರಿ ಎಸ್, ಎಸ್ ಹೆಚ್ ರಿಹಾನ್, ಎಂ ಶಮಾಜ್ ಭಾಗವಹಿಸಿರುತ್ತಾರೆ.
ಜೂನಿಯರ್ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಏಳನೇ ತರಗತಿಯ ಅಬ್ದುಲ್ ಇಬಾಸ್, ಎಸ್ ಮೊಹಮ್ಮದ್ ಝಯಿನ್, ಮೊಹಮ್ಮದ್ ಅಝನ್ ಕೆ. ಎ, ಫಾಸ್ ಎಂ, ಮೊಹಮ್ಮದ್ ರಿಷಕ್, ಮಹಮ್ಮದ್ ರಿಶಾದ್, ಅಬ್ದುಲ್ ಲಬೀಬ್, ಆಯುಷ್ ಕೆ ರಾವ್, ಶ್ರುತರಾಜ್, ರನೀಸ್ ಅಹಮದ್, ಮೊಹಮ್ಮದ್ ಆಝಿಮ್ 6ನೇ ತರಗತಿಯ ಲುಥಿಫಿ ರಫೀಕ್ ಅಬ್ದುಲ, ಹಿನಾನ್ ಮಾಝಿನ್,ವಂಶಿಕ್ ಬಿ ಹೆಚ್, ಮೊಹಮ್ಮದ್ ಹಾದಿ ಸನಾದ್ ಭಾಗವಹಿಸಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.