ಸುಳ್ಯ: ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮೌಖಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನ ವಿಭಾಗದ ವತಿಯಿಂದ ನಿರಂತರ ಕಲಿಕಾ ಕಾರ್ಯಕ್ರಮದ ಭಾಗವಾಗಿ “ ಓರಲ್ ಪತೋಲಾಜಿ – ಬ್ಯಾಕ್ ಬೋನ್ ಅಫ್ ಕ್ಲಿನಿಕಲ್ ಡೆಂಟಿಸ್ಟ್ರಿ ಎಂಬ ವಿಷಯದ ಬಗ್ಗೆ ಕಾರ್ಯಗಾರ ಆಯೋಜಿಸಲಾಯಿತು. ಕಾಲೇಜಿನ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ.ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆರ್.ವಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು ಇದರ ಪ್ರಧ್ಯಾಪಕರಾದ ಡಾ. ಮಧುರ ಯಂ.ಜಿ. ಭಾಗವಹಿಸಿ ಕ್ಲಿನಿಕಲ್ ಡೆಂಟಿಸ್ಟ್ರಿಯಲ್ಲಿ, ಮೌಕಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನದ ಉಪಯೋಗದ ಕುರಿತು ಮಾಹಿತಿ ನೀಡಿದರು.
ಪ್ರಾಂಶುಪಾಲರಾದ ಡಾ. ಮೋಕ್ಷಾ ನಾಯಕ್ರವರು ಪ್ರಾಸ್ತವಿಕ ಮಾತನಾಡಿ ಶುಭಹಾರೈಸಿದರು.ಕಾರ್ಯಕ್ರಮವು ವಿದಾರ್ಥಿಗಳ ಪ್ರಾರ್ಥನೆಯೊಂದಿಗೆ ಅರಂಭಗೊಂಡಿತು. ವಿಭಾಗ ಮುಖ್ಯಸ್ಥೆ ಡಾ. ಶೈಲ ಪೈ ಸ್ವಾಗತಿಸಿದರು. ದಂತ ಮಹಾವಿದ್ಯಾಲಯದ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಡಾ. ಸುಪ್ರೀಯ ಹೆಚ್ ಸಂಪನ್ಮೂಲ ವ್ಯಕ್ತಿಗಳನ್ನು
ಪರಿಚಯಿಸಿದರು. ಡಾ. ಅನಿತಾ ದಯಕರ್ ವಂದಿಸಿದರು. ಡಾ. ಚ್ಯತನ್ಯ ಹಾಗೂ ವಿಭಾಗ ಸಿಬ್ಬಂದಿ ಸಹಕರಿಸಿಕರು. ಬಳಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.