ಸುಳ್ಯ: ಕೆವಿಜಿ ಅಮರಜ್ಯೋತಿ ಪಿ.ಯು. ಕಾಲೇಜಿನ ವಾರ್ಷಿಕೋತ್ಸವ ‘ಎಜೆ ಫಿಯೆಷ್ಟಾ 2024’ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನ ಅಮರ ಜ್ಯೋತಿಯಲ್ಲಿ ನ.12ರಂದು ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ನಾವು ಉತ್ತಮ ವ್ಯಕ್ತಿಗಳಾಗಿ ಬದುಕಲು ಶಿಕ್ಷಣ ಅತ್ಯಗತ್ಯ. ಇದನ್ನು ಅರಿತು ಡಾ. ಕುರುಂಜಿಯವರು ಸುಳ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.ಡಾ. ಕುರುಂಜಿಯವರ ಹಾದಿಯಲ್ಲಿ
ಡಾ. ರೇಣುಕಾಪ್ರಸಾದ್ ಅವರು ಶಿಕ್ಷಣ ಸಂಸ್ಥೆಗಳನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ.ಡಾ. ಕುರುಂಜಿಯವರು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ಅರಿತು ಅವರ ಹಾದಿಯಲ್ಲೇ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುತ್ತಿದ್ದಾರೆ ಎಂದು ಹೇಳಿದರು.
ಇನ್ನೊರ್ವ ಮುಖ್ಯ ಅತಿಥಿ ಎಸ್.ಎಲ್.ವಿ. ಬುಕ್ ಹೌಸ್ ಚೆಯರ್ಮೆನ್ ದಿವಾಕರ್ದಾಸ್ ಮಾತನಾಡಿ ಹೆತ್ತವರನ್ನು, ವಿದ್ಯೆ ಕಲಿಸಿದ ಗುರುಗಳನ್ನು ಮತ್ತು ಹಿರಿಯರನ್ನು ಗೌರವಿಸಬೇಕು. ಆಗ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದರು.
ಕೆ.ವಿ.ಜಿ ಚಾರಿಟೇಬಲ್ ಟ್ರಸ್ಟ್ ಆಡಳಿತ ನಿರ್ದೇಶಕರೂ, ಎ.ಒ.ಎಲ್.ಇ. ಕಮಿಟಿ ಬಿ ಚಯರ್ ಮೆನ್ ಡಾ. ರೇಣುಕಾಪ್ರಸಾದ್ ಕೆ.ವಿ ಅಧ್ಯಕ್ಷತೆ ವಹಿಸಿದ್ದರು. ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಮೆಂಬರ್ ಹಾಗೂ ಕೆ.ವಿ.ಜಿ. ಅಮರಜ್ಯೋತಿ ಪ.ಪೂ. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಮಾತನಾಡಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋಧ ರಾಮಚಂದ್ರ ಕಾಲೇಜನ ವಾರ್ಷಿಕ ವರದಿ ವಾಚಿಸಿದರು. ಭಾಗೀರಥಿ ಮುರುಳ್ಯ ಮತ್ತು ದಿವಾಕರ್ದಾಸ್ ಅವರನ್ನು ಸನ್ಮಾನಿಸಲಾಯಿತು.ಉಪನ್ಯಾಸಕರಾದ ಮಲ್ಲಿಕಾ ಹಾಗೂ ಸುಶ್ಮಿತಾ ಜಾಕೆ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕಿ ರೀತಿ ಲಕ್ಕಿ ಪೋಷಕರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಉಪನ್ಯಾಸಕಿ ಭವ್ಯ ಸಿ.ಟಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಉಪನ್ಯಾಸಕಿ ಅಭಿಜ್ಞಾ ಕೆವಿಜಿ ಎಜೆ ಸ್ಕಾಲರ್ ಶಿಫ್ ಫಲಿತಾಂಶವನ್ನು ವಾಚಿಸಿದರು. ಉಪನ್ಯಾಸಕರಾದ ಬೀನಾ ಮತ್ತು ದೀಕ್ಷಿತ್ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರನ್ನು, ರಾಜೇಶ್ ಟ್ಯಾಲಿ ಕೋರ್ಸ್ ಪೂರೈಸಿದ ವಿದ್ಯಾರ್ಥಿಗಳ ಹೆಸರನ್ನು ಮತ್ತು ರತ್ನಾವತಿ ಇತರ ಸಂಸ್ಥೆಗಳು ಕಳುಹಿಸಿದ ಶುಭಾಶಂಸನೆಗಳನ್ನು ವಾಚಿಸಿದರು.ಉಪ ಪ್ರಾಂಶುಪಾಲರಾದ ದೀಪಕ್ ವೈ.ಆರ್ ಸ್ವಾಗತಿಸಿ, ಉಪನ್ಯಾಸಕಿ ಅರ್ಪಿತಾ ವಂದಿಸಿದರು. ಉಪನ್ಯಾಸಕಿ ಮಲ್ಲಿಕಾ ಎಂ.ಎಲ್, ವಿದ್ಯಾರ್ಥಿಗಳಾದ ಪ್ರತಿಜ್ಞಾ, ಶ್ರೇಯಸ್ ಕುಕ್ಕುಜೆ, ತನ್ವಿ ಯು.ಟಿ ಮತ್ತು ನಹೀಮಾ ತಸ್ನೀನ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.