ಪುತ್ತೂರು: ಪುತ್ತೂರು ತಹಶೀಲ್ದಾರ್ ಆಗಿ ಎನ್.ಎ.ಕುಂಞಿ ಅಹಮ್ಮದ್ ಅಧಿಕಾರ ಸ್ವೀಕರಿಸಿದರು.ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಪುತ್ತೂರು ತಹಸೀಲ್ದಾರ್ ಪುರಂದರ ಹೆಗಡೆ ವರ್ಗಾವಣೆಯಾಗಿದೆ. ಪಿರಿಯಾಪಟ್ಟಣ ತಹಶೀಲ್ದಾರ್ ಆಗಿದ್ದ ಕುಂಞಿ ಅಹಮ್ಮದ್ ಅವರಿಗೆ
ಪುತ್ತೂರು ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದೆ. ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು.ತಹಸೀಲ್ದಾರ್ ಆಗಿದ್ದ ಪುರಂದರ ಹೆಗಡೆ ಅವರು ಅಧಿಕಾರ ಹಸ್ತಾಂತರಿಸಿದರು.ಪುತ್ತೂರು ತಾಲೂಕು ಕಚೇರಿಯ ಅಧಿಕಾರಿಗಳಾದ ದಯಾನಂದ ಡಿ.ಟಿ.ಮತ್ತಿತರರು ಉಪಸ್ಥಿತರಿದ್ದರು. ಕುಂಞಿ ಅಹಮ್ಮದ್ ಅವರು ಈ ಹಿಂದೆ ಸುಳ್ಯ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.









