ಸುಳ್ಯ:ಸುಬ್ರಹ್ಮಣ್ಯ ಸೇರಿ ಸುಳ್ಯ ಹಾಗು ಕಡಬ ತಾಲೂಕಿನ ವಿವಿಧ ಭಾಗದಲ್ಲಿ ಧಾರಕಾರ ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ಕಾದಿದ್ದ ಇಳೆಗೆ ತಂಪೆರೆದಿದೆ. ಸೆಕೆಗೆ ಬಸವಳಿದಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಲಿನ ಪರಿಸರದಲ್ಲಿ ಒಂದು ಗಂಟೆಗೂ ಅಧಿಕ
ಸಮಯ ಗಾಳಿ, ಗುಡುಗು ಸಹಿತ ಧಾರಾಕಾರ ಮಳೆಯಾಗಿ ತಂಪೆರೆದಿದೆ. ಸುಬ್ರಹ್ಮಣ್ಯದಲ್ಲಿ 54 ಮಿ.ಮಿ. ಮಳೆ ಸುರಿದಿದೆ. ದೊಡ್ಡತೋಟದ ಬಳಿ ಕಿಲಾರ್ಕಜೆಯಲ್ಲಿ ಉತ್ತಮ ಮಳೆಯಾಗಿದ್ದು 26 ಮಿ ಮೀ ಮಳೆ ಬಂದಿದೆ. ದುಗ್ಗಲಡ್ಕ ಮತ್ತಿತರ ಕಡೆಗಳಲ್ಲಿ ಉತ್ತಮ ಮಳೆ ಸುರಿದಿದೆ. ಸುಳ್ಯದಲ್ಲಿ ಮೋಡ ಕವಿದ ವಾತಾವರಣ ಇದ್ದಿ ಮಧ್ಯಾಹ್ನ ವೇಳೆ ಕೆಲ ಹೊತ್ತು ಹನಿ ಮಳೆಯಾಗಿದೆ. ಕಡಬ ತಾಲೂಕಿನ ಕೆಲವೆಡೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.