ಸುಳ್ಯ:ಗಡಿ ಗ್ರಾಮಗಳ ಬಹು ಕಾಲದ ಬೇಡಿಕೆಗೆ ಸ್ಪಂದಿಸಿ
ಕಾಞಂಗಾಡ್ನಿಂದ ಬಂದಡ್ಕ ಮೂಲಕ ಸುಳ್ಯಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸಿದ ಕೇರಳ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ
ಸುಳ್ಯ ಬ್ಲಾಕ್ ಉಪಾಧ್ಯಕ್ಷ ಧರ್ಮಪಾಲ ಕೊಯಿಂಗಾಜೆ ಹೇಳಿದ್ದಾರೆ.
ಬಸ್ ಸಂಚಾರ ಆರಂಭಿಸಿರುವುದರಿಂದ ನೂರಾರು ಮಂದಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸ್ಗೆ ಕೊಲ್ಚಾರುವಿನಲ್ಲಿ ಸಾರ್ವಜನಿಕರು ಸೇರಿ ಬಸ್ಸಿಗೆ ಆರತಿ ಎತ್ತಿ, ಡ್ರೈವರ್ ಹಾಗೂ ಕಂಡೆಕ್ಟರ್ ಗೆ ಹಾರ ಹಾಕಿ ಸ್ವಾಗತ ಮಾಡಲಾಯಿತು.





