ಸುಳ್ಯ:ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸುಳ್ಯ ಶಾಸಕರ ಕಚೇರಿಯಲ್ಲಿ ನ.6ರಂದು ನಡೆದ ಸಭೆಯಲ್ಲಿ ಕೆಎಸ್ಆರ್ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಸುಳ್ಯ ಡಿಪ್ಪೋ ವ್ಯವಸ್ಥಾಪಕರಾದ ವಸಂತ ನಾಯಕ್ ಮತ್ತಿತರ ಅಧಿಕಾರಿಗಳು, ಪ್ರಮುಖರು ಭಾಗವಹಿಸಿದ್ದರು. ಸುಳ್ಯ ಕ್ಷೇತ್ರದ ವಿವಿಧ ಭಾಗಗಳಿಗೆ ಬಸ್ ಸಂಚಾರ ಆರಂಭಿಸಲು ಮತ್ತು ಸುಳ್ಯ ಘಟಕಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಒದಗಿಸಲು

ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು. ಸುಳ್ಯ ಘಟಕಕ್ಕೆ ಹೆಚ್ಚುವರಿ ಡ್ರೈವರ್ ಮತ್ತು ಕಂಡೆಕ್ಟರ್ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು. ಸುಬ್ರಹ್ಮಣ್ಯದಲ್ಲಿ ಹೊಸ ಬಸ್ ಡಿಪ್ಪೊ ಮತ್ತು ಕಡಬದಲ್ಲಿ ಹೊಸ ಬಸ್ ನಿಲ್ದಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.ಸುಳ್ಯ ವಿಧಾನಸಭಾ ವ್ಯಾಪ್ತಿಯ ಸುಳ್ಯ ಮತ್ತು ಕಡಬ ತಾಲೂಕಿನ ಗ್ರಾಮೀಣ ಪ್ರದೇಶದ ಕೆಲವು ಮಾರ್ಗಗಳಲ್ಲಿ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿಗೆ ಬಸ್ಸು ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಕೋರಿಕೊಂಡಿದ್ದು ಈ ಸಾರ್ವಜನಿಕರ ಬೇಡಿಕೆಗಳು ಬೇಡಿಕೆಗಳನ್ನು ಆದಷ್ಟು ಶೀಘ್ರವಾಗಿ ಈಡೇರಿಸಿ ಬಸ್ ವ್ಯವಸ್ಥೆ ಮಾಡಬೇಕಾಗಿದೆ ಎಂದು ಶಾಸಕರು ಹೇಳಿದರು.
ತೊಡಿಕಾನ-ಸುಳ್ಯ ಮಾರ್ಗದಲ್ಲಿ ಪ್ರತಿದಿನ ಬಸ್ಸು ಸಂಚಾರ, ಅಡ್ಡಬೈಲು-ಬೀದಿಗುಡ್ಡೆ-ಎಣ್ಣೆಮಜಲು ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರತಿದಿನ ಬಸ್ಸು ಸಂಚಾರ, ಸುಳ್ಯದಿಂದ ಉಬರಡ್ಕ ಮಾರ್ಗವಾಗಿ ಮಡಪ್ಪಾಡಿ (ಸಾಯಂಕಾಲ), ಮಡಪ್ಪಾಡಿಯಿಂದ ಉಬರಡ್ಕ ಮಾರ್ಗವಾಗಿ ಸುಳ್ಯ (ಬೆಳಿಗ್ಗೆ ಬಸ್ಸು ಸಂಚಾರ ಆರಂಭಿಸಬೇಕು .ಬೆಳ್ಳಾರೆ -ನಿಂತಿಕಲು-ಕಾಣಿಯೂರು- ಆಲಂಕಾರು ಮಾದೇರಿ ಮಾರ್ಗವಾಗಿ
ನೆಲ್ಯಾಡಿಗೆ, ಪುತ್ತೂರು-ಕಾಣಿಯೂರು-ನಿಂತಿಕಲ್ಲು-ಸುಬ್ರಹ್ಮಣ್ಯ ಮಾರ್ಗವಾಗಿ ಬೆಂಗಳೂರು ರಾತ್ರಿ ಸಮಯ 10ಗಂಟೆಗೆ ಪಲ್ಲಕ್ಕಿ ಶ್ರೇಣಿ ಬಸ್ಸು ಒದಗಿಸಬೇಕು. ಸುಬ್ರಹ್ಮಣ್ಯ- ಸುಳ್ಯ-ಬಂದಡ್ಕ-ಕಾಸರಗೋಡು ಅಥವಾ ಮೈಸೂರು-ಸುಳ್ಯ-ಬಂದಡ್ಕ- ಕಾಸರಗೂಡು ಅಂತರ್ ರಾಜ್ಯ ಬಸ್ ಆರಂಭಿಸಬೇಕು. ಇಚ್ಲಂಪ್ಪಾಡಿಯಿಂದ ಧರ್ಮಸ್ಥಳ-ಉಜಿರೆ ಬೆಳಗ್ಗಿನ ಸಮಯ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ, ಬೆಳ್ಳಾರೆಯಿಂದ ಸುಳ್ಯಕ್ಕೆ ಸಂಜೆ 5:45 ರಿಂದ 6:00 ಗಂಟೆ ಸಮಯಕ್ಕೆ ಬಸ್ ವ್ಯವಸ್ಥೆ. ವಿದ್ಯಾರ್ಥಿಗಳಿಗಾಗಿ ಮಡಿಕೇರಿಯಿಂದ ಸುಳ್ಯ, ಸುಳ್ಯ- ಮಡಿಕೇರಿ (ಬೆಳಿಗ್ಗೆ (ಸಾಯಂಕಾಲ) ಹೆಚ್ಚುವರಿ ಬಸ್ ಸಂಚಾರ.ಕಡಬ-ಅಲಂಗಾರು-ನೇರಂಕಿ-ಗೋಳಿತ್ತೊಟು- ನೆಲ್ಯಾಡಿ -ಬಲ್ಯ ಮಾರ್ಗವಾಗಿ ಕಡಬ,ಕಡಬ-ಬಲ್ಯ-ನೆಲ್ಯಾಡಿ-ಗೋಳಿತ್ತೊಟು-ಆಲಂತಾಯ -ನೇರಂಕಿ ಮಾರ್ಗವಾಗಿ ಕಡಬ ಬಸ್ ವ್ಯವಸ್ಥೆ ಹಾಗೂ ಕಲ್ಮಡ್ಕ ಹಾಸನಡ್ಕ, ಕುಕ್ಕುಜಡ್ಕ ಮಾರ್ಗವಾಗಿ ಸುಳ್ಯಕ್ಕೆ ಬಸ್ ವ್ಯವಸ್ಥೆಯ ಬೇಡಿಕೆ ಇದ್ದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ, ಗುರುದತ್ ನಾಯಕ್, ಚನಿಯ ಕಲ್ತಡ್ಕ, ಬಾಲಕೃಷ್ಣ ಕೀಲಾಡಿ, ಮಹೇಶ್ ಕುಮಾರ್ ಮೇನಾಲ, ಸುನಿಲ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.









