ಹರಿಹರ:ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವಿಟ್ಲ,ಎಫ್ ಆಯಿಲ್ ಪಾಮ್ ಲಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹರಿಹರ ಇವರುಗಳ ಸಹಯೋಗದಲ್ಲಿ ರೈತರಿಗೆ ಏಣಿ ವಿತರಣಾ ಕಾರ್ಯಕ್ರಮ ಹರಿಹರ ಪಲ್ಲತಡ್ಕ ಕೊಲ್ಲಮೊಗ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಸಹಕಾರಿ ಸಂಘೆ ಅಧ್ಯಕ್ಷ ಸೋಮಶೇಖರ ಕಟ್ಟೆಮನೆ ವಹಿಸಿದ್ದರು. ಕೃಷಿ ಸಖಿ ಮೋಹಿನಿ ವಿಶ್ವನಾಥ್ ಸಂಪಾಜೆ ರೇಷ್ಮೆ ಕೃಷಿ, ಮಲ್ಲಿಗೆ ಕೃಷಿ, ಗೇರು ಬೆಳೆಗಳ ಮೌಲ್ಯವರ್ಧನೆ, ಪ್ರಯೋಜನಗಳು ಹಾಗೂ ರೈತರಿಗೆ ಕೃಷಿ ಅಭಿವೃದ್ಧಿ ಸಂಸ್ಥೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕ್ಲಸ್ಟರ್ ಸೂಪರ್ವೈಸರ್ ರವಿಶಂಕರ್ ತಾಳೆ ಕೃಷಿ ಬಗ್ಗೆ ಮಾಹಿತಿ ನೀಡಿದರು.
ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ್ ಇಡ್ಯಡ್ಕ, ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಬೆಳ್ಯಪ್ಪಗೌಡ,ಸುಧೀರ್ ಕಟ್ಟೆಮನೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರಿಹರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗದೀಶ್ ಪಡ್ಪು,ರಾಜೇಶ್ ಬಟ್ಟಕಜೆ ಎಲಿಮಲೆ, ಸೊಸೈಟಿ ನಿರ್ದೇಶಕರು ರೇಗನ್ ಶೆಟ್ಯಡ್ಕ,ಹಿಮ್ಮತ್ ಕೆ. ಸಿ, ಗೋಪಾಲ ಕೊಲ್ಲಮೊಗ್ರ ಮಾಜಿ ನಿರ್ದೇಶಕರು, ಗ್ರಾಮದ ಕೃಷಿಕರು, ಸಂಜೀವಿನಿ ಒಕ್ಕೂಟದ ವೇದಾವತಿ, ದಿವ್ಯಾ, ಸವಿತಾ ಭಾಗವಹಿಸಿದ್ದರು. ಸೋಮಶೇಖರ ಕಟ್ಟೆಮನೆ ಸ್ವಾಗತಿಸಿ, ಗಣೇಶ್ ಇಡ್ಯಡ್ಕ ವಂದಿಸಿದರು. ಪ್ರಥಮ ಹಂತದಲ್ಲಿ ಅರ್ಜಿ ಸಲ್ಲಿಸಿದ 112 ಫಲಾನುಭವಿಗಳಿಗೆ ಏಣಿಯನ್ನು ವಿತರಿಸಲಾಯಿತು.














