ಸುಳ್ಯ:ದ.ಕ.ಜೇನು ವ್ಯವಸಾಯಗಾರರ ಸಹಕಾರ ಸಂಘದ ಜೇನು ಸಂಸ್ಕರಣಾ ಘಟಕಕ್ಕೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಎಸ್. ಆರ್ ಭೇಟಿ ನೀಡಿದರು. ಮಾಧುರಿ ಜೇನು ಹಾಗೂ ಜೇನು ಚಾಕಲೇಟ್ ಬಗ್ಗೆ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಜೇನು ಸಹಕಾರ ಸಂಘ ಇಷ್ಟು ದೊಡ್ಡ ಮಾಟ್ಟದಲ್ಲಿ ಬೆಳೆದು ಬಂದಿರುವುದು ಸಂತಸದ ವಿಷಯ. ಕೃಷಿಕರು, ಸಂಘದ ಅಧ್ಯಕ್ಷರು ಹಾಗೂ
ಆಡಳಿತ ಮಂಡಳಿಯ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಜೇನನ್ನು ರೈತರು ಹೆಚ್ಚು ಜೇನು ಉತ್ಪಾದಿಸಬೇಕು ಮತ್ತು ಉದಿಮೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರದಿಂದ ಜೇನು ಕೃಷಿಕರಿಗೆ ಹೆಚ್ಚಿನ ಸಹಾಯ ದೊರೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಾಗಿದೆ. ಜೇನು ಚಾಕಲೇಟ್ಗೆ ಉತ್ತಮ ಮಾರುಕಟ್ಟೆ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು. ಸರಕಾರ ಕೂಡ ಪ್ರೋತ್ಸಾಹ ನೀಡಬೇಕು. ಜನರು ಚಾಕಲೇಟ್ ಖರೀದಿಸುವ ಮೂಲಕ ಜನರು ಬೆಂಬಲ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಜೇನು ವ್ಯವಸಾಯಗಾರರ ಸಹಕಾರ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಕೃಷಿಕ ಸಮಾಜದ ರಾಜ್ಯ ನಿರ್ದೇಶಕರಾದ ಪದ್ಮನಾಭ ರೈ, ಸುಪ್ರೀತ್ ಮೋಂಟಡ್ಕ ಹಾಗೂ ಜೇನು ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಚಂದ್ರ ಕೋಲ್ಚಾರ್ ಮಂಜುನಾಥ್ ಗೌಡ ಅವರನ್ನು ಸನ್ಮಾನಿಸಿ, ಗೌರವಿಸಿದರು.












