ಕಲ್ಲಪಳ್ಳಿ: ಪನತ್ತಡಿ ಗ್ರಾಮ ಪಂಚಾಯತ್ ಮತ್ತು ಕೃಷಿ ಇಲಾಖೆ ಪನತ್ತಡಿ ನೇತೃತ್ವದಲ್ಲಿ ಕೃಷಿಕರ ದಿನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಕೃಷಿಕ ಪ್ರಶಸ್ತಿ ವಿತರಿಸಲಾಯಿತು. ಗಡಿ ಪ್ರದೇಶವಾದ ಕಲ್ಲಪಳ್ಳಿಯ ಇಬ್ಬರು ಕೃಷಿಕರು ಪ್ರಶಸ್ತಿ ಪಡೆದರು.ಉತ್ತಮ ‘ಹಿರಿಯ ಕೃಷಿಕ’ ಪ್ರಶಸ್ತಿಯನ್ನು
ಕಲ್ಲಪ್ಪಳ್ಳಿಯ ಕೃಷಿಕರಾದ ಶಿವಪ್ಪ ಗೌಡ ಗರುಗುಂಜ ಹಾಗೂ ಉತ್ತಮ ಸಾವಯವ ಕೃಷಿಕ ಪ್ರಶಸ್ತಿಯನ್ನು ಕಲ್ಲಪ್ಪಳ್ಳಿಯ ಕೃಷಿಕ ನವೀನ್. ಯಂ.ವಿ.ಪನಯಾಲ ಅವರು ಪಡೆದರು.ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಲಕ್ಷ್ಮಿ. ಎಂ ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಪನತ್ತಡಿ ಪಂಚಾಯತ್ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ, ಪನತ್ತಡಿ ಪಂಚಾಯತ್ ಸದಸ್ಯರಾದ ರಾಧಾಕೃಷ್ಣ ಕಲ್ಲಪಳ್ಳಿ, ವೇಣುಗೋಪಾಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





