ಸುಳ್ಯ: ತೆಲಂಗಾಣದಲ್ಲಿ ನಡೆದ 17 ವರ್ಷದ ಹುಡುಗರ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬೆಳ್ಳಾರೆ ಕೆಪಿಎಸ್ ವಿದ್ಯಾರ್ಥಿಗಳಾದ ಇಬ್ಬರು ಕ್ರೀಡಾಪಟುಗಳನ್ನು ಒಳಗೊಂಡ ಕರ್ನಾಟಕ ಕಬಡ್ಡಿ ತಂಡ ದ್ಚಿತೀಯ ಸ್ಥಾನ ಪಡೆದು ಖೇಲೋ ಇಂಡಿಯಾ ರಾಷ್ಟ್ರೀಯ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ಬೆಳ್ಖಾರೆ ಕೆಪಿಎಸ್ನ 10ನೇ ತರಗತಿಯ ವಿದ್ಯಾರ್ಥಿಗಳಾದ
ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ ಇವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಕೆಪಿಎಸ್ನ ದೈಹಿಕ ಶಿಕ್ಷಣ ಶಿಕ್ಷಕಿಯಾದ ಪುಷ್ಪಾವತಿ ಅವರು ಕರ್ನಾಟಕ ತಂಡದ ವ್ಯವಸ್ಥಾಪಕಿಯಾಗಿದ್ದರು. ಪುಷ್ಪಾವತಿ ಅವರು ಖೇಲೋ ಇಂಡಿಯಾದ ಕ್ರೀಡಾಧಿಕಾರಿಯಾಗಿ ಪುಷ್ಪಾವತಿ ಆಯ್ಕೆಯಾಗಿದ್ದಾರೆ.

ಜ.13 ರಂದು ಕ್ರೀಡಾ ಪಟುಗಳಿಗೆ ಸ್ವಾಗತ: ತೆಲಂಗಾಣದಿಂದ ಬೆಂಗಳೂರು ಮೂಲಕ ಸುಬ್ರಹ್ಮಣ್ಯ ಮಾರ್ಗವಾಗಿ ಜ.13ರಂದು . ಕ್ರೀಡಾಪ್ರತಿಭೆಗಳು ಹಾಗೂ ಕ್ರೀಡಾಧಿಕಾರಿಯಾದ ಪುಷ್ಪಾವತಿ ಆಗಮಿಸಲಿದ್ದಾರೆ. ಇವರನ್ನು ಸುಬ್ರಹ್ಮಣ್ಯ ದಿಂದ ಬರಮಾಡಿಕೊಂಡು ಪೂರ್ವಾಹ್ನ 10 ಕ್ಕೆ ಪಂಜ ಪೇಟೆಯಿಂದ ಮೆರವಣಿಗೆಯ ಮೂಲಕ ಸಂಸ್ಥೆಗೆ ಬರಮಾಡಿಕೊಳ್ಳಲಾಗುವುದು ಎಂದು ಬೆಳ್ಳಾರೆ ಕೆಪಿಎಸ್ನ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ ತಿಳಿಸಿದ್ದಾರೆ.









