ಕೊಯನಾಡು: ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ಘಟನೆ ಕೊಡಗು ಸಂಪಾಜೆಯ ಕೊಯನಾಡಿನಲ್ಲಿ ಸಂಭವಿಸಿದೆ. ಇಂದು ಬೆಳಿಗ್ಗೆ ಅಪಘಾತವಾಗಿ ಮೃತಪಟ್ಟ ನೆಲೆಯಲ್ಲಿ ಇಬ್ಬರ ಮೃತದೇಹ ಕಂಡು ಬಂದಿದೆ. ರಾತ್ರಿ ವೇಳೆ ರಸ್ತೆ ಬದಿಯ ಮೋರಿಗೆ ಬೈಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮುಖ್ಯ ರಸ್ತೆ ಬದಿಯ ಚರಂಡಿಯಲ್ಲಿ ಬೈಕ್ ಹಾಗೂ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ಯುವಕರು ಮೈಸೂರು ಮೂಲದವರು ಎಂದು ತಿಳಿದು ಬಂದಿದೆ
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post