ಕೊಲ್ಲಮೊಗ್ರ:ಕೊಲ್ಲಮೊಗ್ರ ಕೆವಿಜಿ ಅನುದಾನಿತ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚಿಸಲಾಯಿತು. ಸಂಘದ ಅಧ್ಯಕ್ಷರಾಗಿ ಕ್ರಿಯಾಶೀಲ ಸಂಘಟಕ ಉದಯ ಶಿವಾಲ ಆಯ್ಕೆಯಾಗಿದ್ದಾರೆ.
ಕೆ.ವಿ.ಜಿ ಪ್ರೌಢಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಸಭೆಯನ್ನು
ಉದಯ ಶಿವಾಲ
ನೀಲಾವತಿ ತಂಬಿನಡ್ಕ
ಆಡಳಿತ ಮಂಡಳಿಯ ಅಧ್ಯಕ್ಷ ಕಮಾಲಕ್ಷ ಮುಳ್ಳುಬಾಗಿಲು ದೀಪ ಬೆಳಗಿಸಿ ಉದ್ಘಾಟಿಸಿದರು. ನೂತನವಾಗಿ ರಚಿಸಲಾದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಉದಯ ಶಿವಾಲ, ಉಪಾಧ್ಯಕ್ಷರಾಗಿ ತಾರನಾಥ ಪೈಕ ಹಾಗೂ ಶೋಭಸುಕುಮಾರ್, ಕಾರ್ಯದರ್ಶಿಯಾಗಿ ನೀಲಾವತಿ ತಂಬಿನಡ್ಕ,ಜತೆ ಕಾರ್ಯದರ್ಶಿಯಾಗಿ ದಿಲೀಪ್ ಶಿವಾಲ, ಚೇತನ್ ಅಂಜನಕಜೆ , ಖಂಜಾಜಿಯಾಗಿ ವಿದ್ಯಾಶ್ರೀ ಚಾಳೆಪ್ಪಾಡಿ ಆಯ್ಕೆಯಾದರು. ಗೌರವಧ್ಯಕ್ಷರಾಗಿ ಸುರೇಶ್ ಪಿ.ಕೆ ಅವರನ್ನು ಆಯ್ಕೆ ಮಾಡಲಾಯಿತು. ವೆಂಕಟರಮಣ ಕೊಪ್ಪಡ್ಕ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕರಾದ ಬಾಲಕೃಷ್ಣ,ರಾಜೇಶ್ ಮರ್ಕಂಜ, ಚಂದ್ರು ಬಿ,ಲೋಕನಾಥ ಪಿ,ಸಂಧ್ಯರಾಣಿ,ಜಯಶ್ರೀ ಕೆ ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.